ಮುಂಬೈ: ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಶಿವಸೇನೆಗೆ ಎರಡು ಸ್ಥಾನಗಳನ್ನು ನೀಡುವುದಾಗಿ ಹೇಳಿದ್ದು, ಈ ಪ್ರಸ್ತಾಪಕ್ಕೆ ಶಿವಸೇನೆ ಒಪ್ಪಿಗೆ ಸೂಚಿಸಿದೆ.
ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ಶಿವಸೇನೆಗೆ ಎರಡು ಸ್ಥಾನಗಳನ್ನು ನೀಡುವುದಾಗಿ ಬಿಜೆಪಿ ನಮಗೆ ಮಾತು ನೀಡಿತ್ತು ಎಂದು ಶಿವಸೇನೆಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಈ ಪ್ರಸ್ತಾಪದ ಬಗ್ಗೆ ತಿಂಗಳ ಹಿಂದೆಯೇ ಮಾತುಕತೆ ನಡೆದಿದ್ದು, ಪಕ್ಷದಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಚಿವ ಸಂಪುಟಕ್ಕೆ ನಾಮನಿರ್ದೇಶನ ಮಾಡಲ್ಪಟ್ಟ ಶಿವಸೇನೆಯ ಇಬ್ಬರು ವ್ಯಕ್ತಿಗಳ ಹೆಸರು ಪ್ರಧಾನಿಯವರ ಕಚೇರಿಗೆ ಗುರುವಾರ ತಲುಪಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರದ ವಿಶ್ವಾಸ ಮತದ ವೇಳೆ ಯಾವುದೇ ಷರತ್ತುಗಳನ್ನು ಮುಂದಿರಿಸದೆ ಮತ ಹಾಕಿದರೆ ಮಾತ್ರ ಶಿವಸೇನೆಯ ಬೇಡಿಕೆಗಳನ್ನು ಬಿಜೆಪಿ ಪರಿಗಣಿಸುವುದಾಗಿ ಬಿಜೆಪಿ ಶಿವಸೇನೆಗೆ ಹೇಳಿದೆ.
ಆದಾಗ್ಯೂ, ಕೇಂದ್ರ ಸಚಿವ ಸಂಪುಟದಲ್ಲಿ 2 ಸ್ಥಾನಗಳು ಲಭಿಸಿದರೂ, ಮಹಾರಾಷ್ಟ್ರದಲ್ಲಿ ಶಿವಸೇನೆಯ ಹಮ್ಮುಗೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶಿವಸೇನೆ ಹೇಳಿದೆ.