ಪ್ರಧಾನ ಸುದ್ದಿ

ಜರ್ಮನ್ ಕಲಿಕೆ ವಿವಾದ: ಮೆರ್ಕೆಲ್ ಅತೃಪ್ತಿ

Guruprasad Narayana

ಬ್ರಿಸ್ಬೇನ್: ಕೇಂದ್ರೀಯ ವಿದ್ಯಾಲಯ ಶಾಲೆಗಳಿಂದ ಮೂರನೇ ಭಾಷಾ ಮಾಧ್ಯಮದ ಕಲಿಕೆಯಾಗಿದ್ದ ಜರ್ಮನ್ ಭಾಷೆಯನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ಆದೇಶದ ವಿಷಯವಾಗಿ, ಜರ್ಮನ್ ಚಾನ್ಸೆಲ್ಲರ್ ಅಂಗೆಲಾ ಮೆರ್ಕೆಲ್ ಬ್ರಿಸ್ಬೇನಿನಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನಡೆದ ಸಭೆಯಲ್ಲಿ ಪ್ರಸ್ತಾಪಿಸಿ, ಭಾರತೀಯ ಮಕ್ಕಳು ಜರ್ಮನ್ ಭಾಷೆ ಕಲಿಯಲು ಅನುಕೂಲ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಮಕ್ಕಳು ಹೆಚ್ಚೆಚ್ಚು ಭಾಷೆಗಳನ್ನು ಕಲಿಯಬೇಕು ಎಂದಿರುವ ಮೋದಿ ಮೆರ್ಕೆಲ್ ಅವರ ಮನವಿಯ ಬಗ್ಗೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು ಎಂದಿದ್ದಾರೆ.

ಇಲ್ಲಿಯವರೆಗೂ ಕೇಂದ್ರೀಯ ವಿದ್ಯಾಲಯದ ೬ ರಿಂದ ೮ ನೆ ತರಗತಿಗಳಿಗೆ ಮೂರನೇ ಐಚ್ಚಿಕ ಭಾಷೆಯಾಗಿ ಜರ್ಮನ್ ಕಲಿಕೆಯ ಅವಕಾಶ ಇತ್ತು. ಈ ವ್ಯವಸ್ಥೆ ಜರ್ಮನ್ ಸರ್ಕಾರದ ಗ್ಯೋಥೆ ಇನ್ಸ್ಟಿಟ್ಯೂಟ್ ಸಹಯೋಗದೊಂದಿಗೆ ಏರ್ಪಟ್ಟಿತ್ತು. ಮಾನವ ಸಂಪನ್ಮೂಲ ಖಾತೆಯ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕೇಂದ್ರೀಯ ವಿದ್ಯಾಲಯದ ನಿರ್ದೇಶಕರ ಸಭೆಯಲ್ಲಿ, ಸಂಸ್ಕೃತ ಕಲಿಕೆಯನ್ನು ಉತ್ತೇಜಿಸಲು ಇತರ ವಿದೇಶಿ ಭಾಷೆಗಳನ್ನು ಪಠ್ಯದಿಂದ ಕೈಬಿಡಲು ನಿರ್ಣಯ ಕೈಗೊಂಡಿತ್ತು.

ಈ ನಡೆ ದೊಡ್ಡ ವಿವಾದವನ್ನು ಸೃಷ್ಟಿಸಿದ್ದು, ಇದು ಆರ್ ಎಸ್ ಎಸ್ ತಮ್ಮ ಅಜೆಂಡಾವನ್ನು ಪಠ್ಯಗಳಲ್ಲಿ ತುಂಬಲು ನಡೆಸುತ್ತಿರುವ ಪ್ರಯತ್ನ ಎಂದೇ ಬಿಂಬಿಸಲಾಗಿತ್ತು. ಅಲ್ಲದೆ ಶೈಕ್ಷಣಿಕ ವರ್ಷದ ಮಧ್ಯೆ ಕೈಗೊಂಡ ಈ ನಿರ್ಣಯ, ಜರ್ಮನ್ ಭಾಷೆಯನ್ನು ಕಲಿಯ್ತುತ್ತಿರುವ ಮಕ್ಕಳು ಮತ್ತು ಪೋಷಕರನ್ನು ಚಿಂತೆಗೀಡು ಮಾಡಿದೆ.

SCROLL FOR NEXT