ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ದ ಪ್ರತಿಭಟನೆ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಕರ್ನಾಟಕದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಆರು ತಿಂಗಳಲ್ಲಿ ದ್ವಿಗುಣ

ದಾಖಲಾದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳ ಸಂಖ್ಯೆ ಕಳೆದ ಆರು ತಿಂಗಳಲ್ಲಿ ದುಪ್ಪಟ್ಟು..

ಬೆಂಗಳೂರು: ದಾಖಲಾದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳ ಸಂಖ್ಯೆ ಕಳೆದ ಆರು ತಿಂಗಳಲ್ಲಿ ದುಪ್ಪಟ್ಟು ಜಾಸ್ತಿಯಾಗಿವೆ. ದುಬಾರಿ ಶಾಲೆಗಳಾದ ವಿಬ್ ಗಯಾರ್, ಆರ್ಚಿಡ್ಸ್, ಮತ್ತು ಕೇಂಬ್ರಿಜ್ ಶಾಲೆಗಳು ಕೆಲವು ತಿಂಗಳುಗಳಿಂದ ಮಕ್ಕಳ ಮೇಲಿನ ದೌರ್ಜನ್ಯಕ್ಕಾಗಿ ಚರ್ಚೆಯಲ್ಲಿರುವ ಶಾಲೆಗಳು.

ಜುಲೈನಿಂದೀಚೆಗೆ, ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (ಪೋಸ್ಕೋ) ೧೧೩ ಪ್ರಕರಣಗಳು ದಾಖಲಾಗಿವೆ. ಇದೇ ವರ್ಷದ ಮೊದಲಾರ್ಧದಲ್ಲಿ (ಜನವರಿ-ಜೂನ್) ೬೨ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ ೨೧೦೩ ರಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ೫೫.

ನವೆಂಬರ್ ೨೦೧೨ ರಿಂದ ಆಗಸ್ಟ್ ೨೧೦೪ ರವರೆಗೆ ರಾಜ್ಯಾದ್ಯಂತ್ಯ ದಾಖಲಾದ ಪ್ರಕರಣದಗಳಲ್ಲಿ, ೨೬೧ ಪ್ರಕರಣಗಳೊಂದಿಗೆ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಇವುಗಳಲ್ಲಿ ೩೦ ಆಪಾದಿತರನ್ನು ಆಗಲೆ ಖುಲಾಸೆ ಮಾಡಲಾಗಿದೆ.

ನವೆಂಬರ್ ೨೦೧೨ ಮತ್ತು ಆಗಸ್ಟ್ ೨೦೧೪ರ ಮಧ್ಯೆ ಪೋಸ್ಕೋದಡಿ ಕರ್ನಾಟಕದಾದ್ಯಂತ ೭೮೮ ಪ್ರಕರಣಗಳು ದಾಖಲಾಗಿವೆ. ಮಾಧ್ಯಮಗಳಲ್ಲಿ ಈ ವಿಷಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು, ಪೋಷಕರಲ್ಲಿ ಹೆಚ್ಚಿನ ತಿಳುವಳಿಕೆ ಮೂಡಿ ಈಗ ಪ್ರಕರಣಗಳನ್ನು ದಾಖಲು ಮಾಡುವಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ.

ಬೆಂಗಳೂರು, ಮೈಸೂರು ಮತ್ತು ಕೋಲಾರ ಶಾಲೆಗಳಲ್ಲಿ, ಲೈಂಗಿಕ ದೌರ್ಜನ್ಯದ ಬಗ್ಗೆ ತಿಳುವಳಿಕೆ ಮೂಡಿಸುವ ಸಿ ಡಿ ಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿರುವ ಸೌಜನ್ಯ "ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಅಥವಾ ರೇಪ್ ಬೆಗ್ಗೆ ತಿಳುವಳಿಕೆ ನೀಡಲು ಶಿಕ್ಷಕರು ಹಿಂಜರಿಯುತ್ತಾರೆ. ಆದುದರಿಂದ ಶ್ರವ್ಯ-ದೃಶ್ಯ ಮಾಧ್ಯಮ ಬಳಸಿಕೊಂಡು ತಿಳುವಳಿಕೆ ಮೂಡಿಸುವ ಅವಶ್ಯಕತೆ ಇದೆ " ಎನ್ನುತ್ತಾರೆ.

ತಿಳುವಳಿಕೆಯಿಂದಷ್ಟೆ ದೌರ್ಜನ್ಯಗಳನ್ನು ತಡೆಯಲಾಗುವುದಿಲ್ಲ. ಮಕ್ಕಳಿಗೆ ಅಗತ್ಯ ರಕ್ಷಣೆ ನೀಡಬೇಕು ಎನ್ನುತ್ತಾರೆ ಅವರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT