ಪ್ರಧಾನ ಸುದ್ದಿ

ಚಿಟ್ ಫಂಡ್ ಹಗರಣ: ಒಡಿಶಾದಲ್ಲಿ ಸಿಬಿಐ ದಾಳಿ

Rashmi Kasaragodu

ಭುಬನೇಶ್ವರ್: ಒಡಿಶಾದಲ್ಲಿ ನಡೆದಿರುವ ಬಹುಕೋಟಿ ಚಿಟ್ ಫಂಡ್ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಮಂಗಳವಾರ ರಾಜ್ಯಸಭಾ ಸಭಾ ಸದಸ್ಯ ಪ್ಯಾರಿಮೋಹನ್ ಮೊಹಾಪಾತ್ರ ಅವರ ನಿವಾಸ ಸೇರಿದಂತೆ 22 ಸ್ಥಳಗಳಲ್ಲಿ ದಾಳಿ ನಡೆಸಿದೆ.

ರು. 4,373 ಕೋಟಿ ಹಗರಣದ ಬಗ್ಗೆ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಆದಾಗ್ಯೂ, ಈ ಹಗರಣ ಅಂತಿಂಥದಲ್ಲ, ಬರೋಬ್ಬರಿ ರು.20,000 ಕೋಟಿ ಅವ್ಯವಹಾರ ಇಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಸಿಬಿಐ ದಾಳಿಯಲ್ಲಿ ಈಗಾಗಲೇ ಮೂವರು ಬಿಜೆಡಿ ನಾಯಕರು ಬಂಧಿತರಾಗಿರುವುದರಿಂದ ಆಡಳಿತಾರೂಡ ಬಿಜು ಜನತಾ ದಳ (ಬಿಜೆಡಿ) ಪಕ್ಷಕ್ಕೆ ಇದು ತಲೆನೋವಾಗಿ ಪರಿಣಮಿಸಿದೆ.

ಭುಬನೇಶ್ವರದ 16 ಸ್ಥಳಗಳಲ್ಲಿ, ಕಟಕ್‌ನ 4 ಮತ್ತು ಟಿಲ್ಟಾಗಢ್ ಮತ್ತು ರೌರ್‌ಕೇಲಾದಲ್ಲಿ ಸೀಶೋರ್ ಗ್ರೂಪ್‌ನೊಂದಿಗೆ ಸಂಪರ್ಕ ಹೊಂದಿರುವ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ.

SCROLL FOR NEXT