ಪ್ರಧಾನ ಸುದ್ದಿ

ಬರ್ದ್ವಾನ್ ಸ್ಫೋಟ; ಮ್ಯಾನ್‌ಮಾರ್ ಪ್ರಜೆ ಬಂಧನ

Rashmi Kasaragodu

ಹೈದ್ರಾಬಾದ್: ಬರ್ದ್ವಾನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾಷ್ಟ್ರೀಯ ತನಿಖಾ ದಳ ಹೈದ್ರಾಬಾದ್‌ನಲ್ಲಿ ಮ್ಯಾನ್‌ಮಾರ್ ಪ್ರಜೆಯೊಬ್ಬನನ್ನು ಬಂಧಿಸಿದೆ.

ಬಂಧಿತ ವ್ಯಕ್ತಿಯನ್ನು 21ರ ಹರೆಯದ ಖಾಲಿದ್ ಮಹಮ್ಮದ್ ಎಂದು ಗುರುತಿಸಲಾಗಿ. ಈತ ತೆಲಂಗಾಣದ ರಾಜಧಾನಿಯಲ್ಲಿ ನಕಲಿ ದಾಖಲೆ ಹೊಂದಿ ವಾಸವಾಗಿದ್ದ ಎನ್ನಲಾಗಿದೆ.

ಖಾಲಿದ್ ,  ತಹ್‌ರೀಕ್ ಇ ತಾಲೀಬಾನ್ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿಯಾಗಿದ್ದು ಐಇಡಿ ತಜ್ಞನಾಗಿದ್ದಾನೆ. ಈತ ಬಾಂಗ್ಲಾದೇಶ ಮತ್ತು ಮ್ಯಾನ್‌ಮಾರ್ ಗಡಿ ಪ್ರದೇಶಗಳಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿದ್ದ ಎನ್ನಲಾಗಿದೆ.

ಇಸಿಸ್‌ಗೆ ಸಂಬಂಧಿಸಿದ ಜಿಹಾದಿ ಸಾಹಿತ್ಯವನ್ನೂ ಈತನಿಂದ ವಶ ಪಡಿಸಿಕೊಳ್ಳಲಾಗಿದೆ.

ವಿಶೇಷವೇನೆಂದರೆ, ಪಶ್ಚಿಮ ಬಂಗಾಳದ ಬರ್ದ್ವಾನ್ ಜಿಲ್ಲೆಯಲ್ಲಿ ನಡೆದ ಸ್ಫೋಟದ ಬಗ್ಗೆ ತನಿಖಾದಳ ಬಾಂಗ್ಲಾದೇಶದಲ್ಲಿ ತನಿಖೆ ನಡೆಸುತ್ತಿರುವ ವೇಳೆಯೇ ಖಾಲಿದ್ ಬಂಧನಕ್ಕೊಳಗಾಗಿದ್ದಾನೆ.


SCROLL FOR NEXT