ಇಸಿಸ್ (ಸಾಂದರ್ಭಿಕ ಚಿತ್ರ) 
ಪ್ರಧಾನ ಸುದ್ದಿ

ಅವರು ಹೆಣ್ಮಕ್ಕಳನ್ನು ಮಾರುತ್ತಿದ್ದರು, ಮತಾಂತರ ಮಾಡ್ತಿದ್ರು!

"ಅವರು ಮಕ್ಕಳನ್ನು ಮತ್ತು ಮಹಿಳೆಯರನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದರು, ಹೆಣ್ಮಕ್ಕಳನ್ನು ಮಾರಾಟ..

ನವದೆಹಲಿ: "ಅವರು ಮಕ್ಕಳನ್ನು ಮತ್ತು ಮಹಿಳೆಯರನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದರು, ಹೆಣ್ಮಕ್ಕಳನ್ನು ಮಾರಾಟ ಮಾಡುತ್ತಿದ್ದರು ಮತ್ತು ಅವರನ್ನೇ ಮದುವೆ ಆಗುವಂತೆ ಬಲವಂತ ಮಾಡುತ್ತಿದ್ದರು" -ಇಸ್ಲಾಂ ರಾಷ್ಟ್ರದಲ್ಲಿನ  ಇಸಿಸ್‌ ಸಂಘಟನೆಯ ಬಿಗಿ ಮುಷ್ಠಿಯಿಂದ ತಪ್ಪಿಸಿಕೊಂಡು ಬಂದ 15ರ ಹರೆಯದ ಬಾಲಕಿ ಹೇಳಿದ ಮಾತುಗಳಿವು.

ಅವರು ಹೆಣ್ಮಕ್ಕಳನ್ನು ಮತಾಂತರ ಮಾಡಿ ಉಗ್ರರನ್ನೇ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು ಎಂದು ಬಾಲಕಿ ಇಸಿಸ್ ಸಂಘಟನೆಯಲ್ಲಾದ ಅನುಭವವನ್ನು ಬಿಚ್ಚಿಟ್ಟಿದ್ದಾಳೆ.

ಇಸಿಸ್‌ನ ಮುಷ್ಠಿಯಿಂದ ತಪ್ಪಿಸಿಕೊಂಡು ಬಂದರೂ ಈ ಬಾಲಕಿ ಖುಷಿಯಾಗಿಲ್ಲ. ಅಲ್ಲಿರುವ ನನ್ನ ಗೆಳತಿಯರನ್ನು ರಕ್ಷಿಸಲು ನಾನೇನು ಮಾಡಬೇಕು ಎಂಬುದರ ಬಗ್ಗೆಯೇ ನಾನು ಚಿಂತಿಸುತ್ತಿರುತ್ತೇನೆ. ಆ ಹೆಣ್ಮಕ್ಕಳನ್ನು ರಕ್ಷಿಸುವಂತೆ ನಾನು ಕೆಲವು ಎನ್‌ಜಿಒಗಳಲ್ಲಿ ಅಂಗಲಾಚಿದ್ದೇನೆ ಎಂದು ಬಾಲಕಿ ಹೇಳಿದ್ದಾಳೆ.

ಈ ಹಿಂದೆ ಇಸಿಸ್ ಸಂಘಟನೆಯಿಂದ ಇಬ್ಬರು ಯಜೀದೀ ಬಾಲಕಿಯರು ತಪ್ಪಿಸಿಕೊಂಡು ಬಂದಿದ್ದರು. ನಮ್ಮ ಸಮುದಾಯದ ಪುರುಷರ ಶಿರಚ್ಛೇದ ಮಾಡುವ ವೀಡಿಯೋಗಳನ್ನು ನೋಡುವಂತೆ ನಮಗೆ ಒತ್ತಾಯಿಸುತ್ತಿದ್ದುದು ಮಾತ್ರವಲ್ಲದೆ ಉಗ್ರರ ಕಿರುಕುಳ ಸಹಿಸಲಾರದೆ ನಾವು ಆತ್ಮಹತ್ಯೆಗೂ ಯತ್ನಿಸಿದ್ದೆವು ಎಂದು ಅವರು ಹೇಳಿದ್ದರು.

ಇದೀಗ ಇಸಿಸ್‌ನಿಂದ ತಪ್ಪಿಸಿಕೊಂಡ ಬಂದ ಬಾಲಕಿ ಅಲ್ಲಿನ ನರಕಯಾತನೆ ಬಗ್ಗೆ ಹೇಳಿದ್ದು ಆಕೆಯ ಹೆಸರನ್ನು ಇದುವರೆಗೆ ಬಹಿರಂಗ ಪಡಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!