ಕಿಶ್ತ್ವಾರ್: ಕಾಶ್ಮೀರಕ್ಕೆ ಬಾಲಿವುಡ್ ವಾಪಸ್ ತರುತ್ತೇನೆ ಎಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ವಚನ ನೀಡಿದ್ದಾರೆ.
"ನಾನು ಕಾಶ್ಮೀರಕ್ಕೆ ಬಾಲಿವುಡ್ಡನ್ನು ವಾಪಸ್ ತರಬೇಕು" ಎಂದು ಜಮ್ಮು ಕಾಶ್ಮೀರದ ಕಿಸ್ತ್ವಾರ್ ನಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ತಿಳಿಸಿದ್ದಾರೆ.
ಇಂದು ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಉದ್ದಿಮೆ ಪ್ರವಾಸೋದ್ಯಮವಾಗಿದ್ದು "ನಾನು ಪ್ರವಾಸೋದ್ಯಮವನ್ನೂ ಜಮ್ಮು ಕಾಶ್ಮೀರಕ್ಕೆ ವಾಪಸ್ ತರುತ್ತೇನೆ ಮತ್ತು ಜಮ್ಮು ಕಾಶ್ಮೀರವನ್ನು ವಿಶ್ವದ ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಮಾಡುತ್ತೇನೆ" ಎಂದಿದ್ದಾರೆ.
ಇತ್ತೀಚಿಗೆ ಬಿಡುಗಡೆಯಾದ "ಹೈದರ್" ಒಳಗೊಂಡಂತೆ ಮಿಶನ್ ಕಾಶ್ಮೀರಿ, ಕಾಶ್ಮೀರ್ ಕಿ ಕಲಿ ಮತ್ತು ಇನ್ನು ಬಹಳಷ್ಟು ಸಿನೆಮಾಗಳು ಕಾಶ್ಮೀರದಲ್ಲಿ ಚಿತ್ರೀಕರಣಗೊಂಡಿವೆ.
ವಿಧಾನ ಸಭಾ ಚುನಾವಣೆಗೆ ಐದು ಹಂತದ ಮತದಾನ ನವೆಂಬರ್ ೨೫ ರಂದು ಪ್ರಾರಂಭವಾಗುತ್ತದೆ.