ಕಾಠ್ಮಂಡು-ದೆಹಲಿ ಬಸ್ ಸೇವೆಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ
ಭಾರತೀಯ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನ ಮಂತ್ರಿ ಸುಶೀಲ್ ಕೊಯಿರಾಲ
ಕಾಠ್ಮಂಡು: ಭಾರತೀಯ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನ ಮಂತ್ರಿ ಸುಶೀಲ್ ಕೊಯಿರಾಲ ಬುಧವಾರ ಕಾಠ್ಮಂಡು-ದೆಹಲಿ ಬಸ್ ಸೇವೆ "ಪಾಶುಪತಿನಾಥ್ ಎಕ್ಸ್ ಪ್ರೆಸ್" ಗೆ ಚಾಲನೆ ನೀಡಿದ್ದಾರೆ.
ಹಸಿರು ನಿಶಾನೆ ತೋರುವುದಕ್ಕಿಂತಲೂ ಮುಂಚೆ ಬಲೂನುಗಳು ಮತ್ತು ಹೂಗಳಿಂದ ಅಲಂಕರಿಸಿದ ಬಸ್ಸಿನೊಳಕ್ಕೆ ಹೊಕ್ಕ ಇಬ್ಬರೂ ಪ್ರಧಾನಿಗಳು ಪ್ರಯಾಣಿಕರ ಜೊತೆ ಮಾತುಕತೆ ನಡೆಸಿದರು.
ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸಲು ಈ ಬಸ್ ಸೇವೆ ಸಹಕಾರಿಯಾಗಲಿದೆ ಎಂದು ಬಣ್ಣಿಸಲಾಗಿದ್ದು ದ್ವಿಪಕ್ಷೀಯ ಸಂಬಂಧ ಕೂಡ ಬಲಗೊಳ್ಳಲಿದೆ ಎನ್ನಲಾಗಿದೆ.
ಈ ಬಸ್ಸಿನ ಮಾರ್ಗ ಹೀಗಿದೆ. ಕಾಠ್ಮಂಡು, ಭೈರಾವ, ಸನೌಲಿ, ಗೋರಕ್ ಪುರ, ಲಕ್ನೌ ಮತ್ತು ನವದೆಹಲಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.