ಮುಂಬೈ: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಸಾವನ್ನಪ್ಪಿದ್ದಾರೆ ಎಂಬ ವದಂತಿ ಮಂಗಳವಾರ ಸಾಮಾಜಿಕ ತಾಣದಲ್ಲಿ ಹರಿದಾಡಿ ಆತಂಕ ಸೃಷ್ಟಿಸಿದೆ.
ಸಾವಿನ ವದಂತಿ ಹಬ್ಬುತ್ತಿದ್ದಂತೆ ದಿಲೀಪ್ ಕುಮಾರ್ ಅವರ ಪತ್ನಿ , ದಿಲೀಪ್ ಕುಮಾರ್ ಆರೋಗ್ಯದಿಂದಿದ್ದಾರೆ, ಅವರಿಗೇನೂ ಆಗಿಲ್ಲ ಎಂದು ಸಾರ್ವಜನಿಕ ಹೇಳಿಕೆ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಮುಂಬೈ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಟ್ವೀಟರ್‌ನಲ್ಲಿ ಹರಿದಾಡಿತ್ತು. ಟ್ವೀಟ್ ನೋಡಿ ಬಾಲಿವುಡ್ ಇಂಡಸ್ಟ್ರಿಯೇ ದಂಗು ಬಡಿದಿತ್ತು.
ಈ ವೇಳೆ ಅಮಿತಾಬ್ ಬಚ್ಚನ್ ಯೂಸಫ್ ಸಾಹೇಬ್ (ದಿಲೀಪ್ ಕುಮಾರ್) ಆರೋಗ್ಯದಿಂದಿದ್ದಾರೆ. ಈ ಬಗ್ಗೆ ಸಾಯಿರಾ ಜೀ ನನಗೆ ಹೇಳಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ವದಂತಿಗಳನ್ನು ತಳ್ಳಿ ಹಾಕಿದ್ದಾರೆ.