ಜಮ್ಮುನಲ್ಲಿ ಕಾಳಗ ಅಂತ್ಯ; 12 ಮಂದಿ ಸಾವು
ಭಾರತ ಮತ್ತು ಪಾಕಿಸ್ತಾನದ ಗಡಿಪ್ರದೇಶದ ಬಳಿ ಇರುವ ಅರ್ನಿಯಾ ಸೆಕ್ಟರ್ನಲ್ಲಿ ರಕ್ಷಣಾ ದಳ ಮತ್ತು ಉಗ್ರರ ನಡುವೆ ನಡೆಯುತ್ತಿದ್ದ ...
ಜಮ್ಮು: ಭಾರತ ಮತ್ತು ಪಾಕಿಸ್ತಾನದ ಗಡಿಪ್ರದೇಶದ ಬಳಿ ಇರುವ ಅರ್ನಿಯಾ ಸೆಕ್ಟರ್ನಲ್ಲಿ ರಕ್ಷಣಾ ದಳ ಮತ್ತು ಉಗ್ರರ ನಡುವೆ ನಡೆಯುತ್ತಿದ್ದ ಕಾಳಗ ಶುಕ್ರವಾರ ಅಂತ್ಯಗೊಂಡಿದೆ.
ಸುಮಾರು 32 ಗಂಟೆಗಳ ಕಾಲ ನಡೆದ ಈ ಎನ್ಕೌಂಟರ್ನಲ್ಲಿ 5 ನಾಗರಿಕರು, ಮೂವರು ಸೈನಿಕರು ಸೇರಿದಂತೆ ಒಟ್ಟು 12 ಮಂದಿ ಸಾವಿಗೀಡಾಗಿದ್ದಾರೆ.
ಉಗ್ರರನ್ನು ನಮ್ಮ ಸೈನಿಕರು ಬಗ್ಗು ಬಡಿದಿದ್ದು, ಎನ್ಕೌಂಟರ್ ಅಂತ್ಯಗೊಂದೆ. ಇದರಲ್ಲಿ ಮೂವರು ಸೈನಿಕರು, 5 ನಾಗರೀಕರು ಮತ್ತು ನಾಲ್ವರು ಉಗ್ರರು ಈ ಕಾಳಗದಲ್ಲಿ ಹತರಾಗಿದ್ದಾರೆ ಎಂದು ಜಮ್ಮು ಕಾಶ್ಮೀರ್ ಪೊಲೀಸ್ರ ಡೆರೆಕ್ಟರ್ ಜನರಲ್ ಕೆ. ರಾಜೇಂದ್ರ ಹೇಳಿದ್ದಾರೆ.
ಗುರುವಾರ ಬೆಳಗ್ಗೆ ಉಗ್ರರು ಗುಂಡು ಹಾರಾಟ ನಡೆದಿದ್ದು, ರಕ್ಷಣಾ ದಳ ಪ್ರತಿದಾಳಿ ನಡೆಸಿತ್ತು.
ಕದನ ವಿರಾಮ ಉಲ್ಲಂಘನೆ:
ನವೆಂಬರ್ 26ರಂದು ಪಾಕ್ ಅರ್ನಿಯಾ ಸೆಕ್ಟರ್ ಮೇಲೆ ದಾಳಿ ನಡೆಸಿತ್ತು. ಈ ನಡುವೆ ನಡೆದ ದಾಳಿಯಲ್ಲಿ ಐವರು ನಾಗರಿಕರು ಸಾವನ್ನಪ್ಪಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.