ಕೇಜ್ರಿವಾಲ್ರಿಂದ ಸ್ವಚ್ಛತಾ ಅಭಿಯಾನ
ಗಾಂಧಿ ಜಯಂತಿಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ್ ಭಾರತ್ ಅಭಿಯಾನಕ್ಕೆ ಚಾಲನೆ...
ನವದೆಹಲಿ: ಗಾಂಧಿ ಜಯಂತಿಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ್ ಭಾರತ್ ಅಭಿಯಾನಕ್ಕೆ ಚಾಲನೆ ನೀಡಿದ್ದರೆ, ಇತ್ತ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಪ್ರತ್ಯೇಕವಾಗಿ ಸ್ವಚ್ಛತಾ ಅಭಿಯಾನವನ್ನು ಕೈಗೊಂಡಿದ್ದಾರೆ.
ದೆಹಲಿಯ ಮಾಜಿ ಮುಖ್ಯಮಂತ್ರಿ ಇಂದು ಬೆಳಗ್ಗೆ ಪ್ರಧಾನಿಯವರ ನಿವಾಸದ ಬಳಿ ರಸ್ತೆ ಗುಡಿಸಿ ಸ್ವಚ್ಛ ಮಾಡಿದ್ದಾರೆ.
ಅದರ ನಂತರ ತನ್ನ ಪಕ್ಷದ ಶಾಸಕರೊಂದಿಗೆ ಬಿ ಆರ್ ಕ್ಯಾಂಪ್ನತ್ತ ತೆರಳಿದ ಕೇಜ್ರಿವಾಲ್, ಪೌರ ಕಾರ್ಮಿಕರೊಂದಿಗೆ ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಅಲ್ಲಿ ಕೇಜ್ರಿವಾಲ್ ಚರಂಡಿ ಕ್ಲೀನ್ ಮಾಡುವುದು ಕಂಡು ಬಂತು.
ಈ ಅಭಿಯಾನದಲ್ಲಿ ಭಾಗವಹಿಸುವಂತೆ ಆಮ್ ಆದ್ಮಿ ಪಕ್ಷ ದೆಹಲಿ ಜನತೆಗೆ ಕರೆ ನೀಡಿದ್ದು, ಪೌರ ಕಾರ್ಮಿಕರು ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸಲು ಎಎಪಿ ನಿರ್ಧಾರ ಕೈಗೊಂಡಿದೆ.