ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪ್ರಧಾನಿ ಕೈಯಲ್ಲೂ ಪೊರಕೆ

'ಸ್ಪಚ್ಛಭಾರತ'ಕ್ಕೆ ಇಂದು ಮುನ್ನುಡಿ. ಜಯಂತಿಯಂದೇ ರಾಷ್ಟ್ರಪಿತನಿಗೆ ಕೊಡುಗೆ...

Rashmi Kasaragodu
Updated On : 2 Oct 2014, 9:37 am

ನವದೆಹಲಿ: 'ಸ್ಪಚ್ಛಭಾರತ'ಕ್ಕೆ ಇಂದು ಮುನ್ನುಡಿ. ಜಯಂತಿಯಂದೇ ರಾಷ್ಟ್ರಪಿತನಿಗೆ ಕೊಡುಗೆ...
ಗುರುವಾರ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಪೊರಕೆ ಹಿಡಿದು ದೇಶದಲ್ಲೇ ಅತೀ ದೊಡ್ಡ  ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ನವದೆಹಲಿಯ ರಾಜ್‌ಪಥ್‌ನಲ್ಲಿ ಬೆಳಗ್ಗೆ ಪ್ರಧಾನಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಜತೆಗೆ ರಸ್ತೆ ವಾಕಥಾನ್‌ಗೂ ಇದೇ ವೇಳೆ ಚಾಲನೆ ದೊರೆಯಲಿದೆ. ಈ ಕಾರ್ಯಕ್ರಮದಲ್ಲಿ  ಸಾವಿರಾರು ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಗಾಂಧಿ ಜಯಂತಿ ರಜೆ ಇದ್ದರೂ ದೆಹಲಿಯಲ್ಲಿ ಗುರುವಾರ ಎಲ್ಲ ಸರ್ಕಾರಿ ಅಧಿಕಾರಿಗಳೂ ಕಚೇರಿಗೆ ಆಗಮಿಸಿ ಶೌಚಾಲಯ ಸೇರಿದಂತೆ ತಮ್ಮ ತಮ್ಮ ಕಚೇರಿಗಳನ್ನು ಸ್ವಚ್ಛಗೊಳಿಸಲಿದ್ದಾರೆ. ಎಲ್ಲಕ್ಕೂ ಮೊದಲು ಮೋದಿ ರಾಜ್‌ಘಾಟ್‌ಗೆ ತೆರಳಿ ಮಹಾತ್ಮನಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ಬಳಿಕ ಗಾಂಧೀಜಿ ಹಲವು ವರ್ಷಗಳ ಕಾಲ ವಾಸವಾಗಿದ್ದ ವಾಲ್ಮೀಕಿ ಕಾಲೊನಿಗೂ ಭೇಟಿ ನೀಡಲಿದ್ದಾರೆ.
ಅಭಿಯಾನದ ಕರೆಯು ದೇಶದ ಕೆಂಪುಕೋಟೆಯಲ್ಲಿ ಮತ್ತು ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ ಮೂಲೆ ಮೂಲೆಗಳಲ್ಲೂ ಈಗಾಗಲೇ ಪ್ರತಿಧ್ವನಿಸಿದೆ.

ರೈಲ್ವೆ ನಿಲ್ದಾಣಗಳಲ್ಲೂ ಸ್ವಚ್ಛತಾ ಕಾರ್ಯ

ಸುಮಾರು 10 ಲಕ್ಷ ಕಾರ್ಮಿಕರನ್ನು ಹೊಂದಿರುವ ರೈಲ್ವೆ ಕೂಡಾ ಅಭಿಯಾನದಲ್ಲಿ ಕೈಜೋಡಿಸಲಿದೆ. ಭಾರತದಾದ್ಯಂತ ಇರುವ 7,700 ನಿಲ್ದಾಣಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ. ರೈಲ್ವೆ ಸಚಿವರು ಮತ್ತು ಮಂಡಳಿ ಸದಸ್ಯರ ನೇತೃತ್ವದಲ್ಲಿ ಹಳಿಗಳು, ರೈಲ್ವೆ ಕಾಲೊನಿಗಳು ಹಾಗು ಉತ್ಪಾದನಾ  ಘಟಕಗಳನ್ನು ಸ್ವಚ್ಛಗೊಳಿಸುವ ಕೆಲಸ ನಡೆಯಲಿದೆ,

ರು. 2 ಲಕ್ಷ ಕೋಟಿ
2019 ರ ಅಕ್ಟೋಬರ್ ವೇಳೆಗೆ ಸ್ವಚ್ಛ ಭಾರತದ ಗುರಿ ಇಟ್ಟುಕೊಂಡಿರುವ ಸರ್ಕಾರ ಈ ಅಭಿಯಾನಕ್ಕೆ 5 ವರ್ಷಗಳಲ್ಲಿ ರು.2 ಲಕ್ಷ ಕೋಟಿ ವ್ಯಯಿಸಲಿದೆ. ನಗರಾಭಿವೃದ್ಧಿ ಸಚಿವಾಲಯವು ದೇಶಾದ್ಯಂತ ರು.62 ಸಾವಿರ ಕೋಟಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ರು. 1.34 ಲಕ್ಷ ಕೋಟಿ ವೆಚ್ಚ ಮಾಡಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement