ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿ ಪ್ರಯಾಣಿಸ ಬೇಕಾಗಿದ್ದ ವಿಮಾನದಲ್ಲಿ ಗ್ರೆನೇಡ್ ಪತ್ತೆ

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾಗೆ ಪ್ರಯಾಣಿಸ ಬೇಕಾಗಿದ್ದ ಏರ್ ಇಂಡಿಯಾ ವಿಮಾನದಲ್ಲಿ ನಿಷ್ಕ್ರಿಯವಾದ ಗ್ರೈನೇಡ್ ಶುಕ್ರವಾರ ...

Rashmi Kasaragodu
Updated On : 4 Oct 2014, 9:26 am

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾಗೆ ಪ್ರಯಾಣಿಸ ಬೇಕಾಗಿದ್ದ  ಏರ್ ಇಂಡಿಯಾ ವಿಮಾನದಲ್ಲಿ  ನಿಷ್ಕ್ರಿಯವಾದ ಗ್ರೈನೇಡ್ ಶುಕ್ರವಾರ ಪತ್ತೆಯಾಗಿದೆ.

ಮುಂಬೈ-ಹೈದ್ರಾಬಾದ್- ಜೆದ್ದಾ ನಡುವೆ ಸಂಚರಿಸುವ ಬೋಯಿಂಗ್ 747-400 ವಿಮಾನದಲ್ಲಿ ಈ ಗ್ರೈನೇಡ್ ಪತ್ತೆಯಾಗಿದೆ ಎಂದು ಏರ್ ಇಂಡಿಯಾದ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಜೆದ್ದಾದಲ್ಲಿ ವಿಮಾನ ಲ್ಯಾಂಡಿಂಗ್ ಆದ ನಂತರ ಈ ವಿಷಯ  ಸ್ಥಳೀಯ ರಕ್ಷಣಾ ಏಜೆನ್ಸಿ ಗಮನಕ್ಕೆ ಬಂದಿದೆ ಎಂದು ಬಲ್ಲಮೂಲಗಳು ಹೇಳಿವೆ. ವಿಮಾನವನ್ನು ಗುರುವಾರ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು.

ತದನಂತರ ವಿಮಾನ ಜೆದ್ದಾಗೆ ಪಯಣ ಬೆಳೆಸಿತ್ತು. ಗ್ರೈನೇಡ್ ಪತ್ತೆಯಾದ ಕಾರಣ ಜೆದ್ದಾ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನವನ್ನು ವಶಕ್ಕೆ ತೆಗೆದು ನಂತರ ಬಿಡುಗಡೆಗೊಳಿಸಿದ್ದಾರೆ. ಈ ಘಟನೆ ಬಗ್ಗೆ ಭಾರತದ ರಕ್ಷಣಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಪ್ಲಾಸ್ಟಿಕ್ ಹೊದಿಕೆ ಅಲ್ಲ, ಅದು ಗ್ರೆನೇಡ್, ಭದ್ರತಾ ವೈಫಲ್ಯ ಮರೆಮಾಚಿದ ಸಂಸ್ಥೆ
ಇದೇ ವೇಳೆ ಪ್ರಧಾನಿ ಪ್ರಯಾಣಿಸ ಬೇಕಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪತ್ತೆಯಾಗಿರುವುದು ಪ್ಲಾಸ್ಟಿಕ್ ಹೊದಿಕೆ ಅಲ್ಲ ಅದು ಗ್ರೆನೇಡ್ ಎಂದು ತಿಳಿದುಬಂದಿದೆ. ಸ್ವತಃ ಕೇಂದ್ರ ಸಚಿವ ಅಶೋಕ್ ಗಣಪತಿ ರಾಜು ಅವರು ಈ ವಿಚಾರವನ್ನು ಬಹಿರಂಗ ಪಡಿಸಿದ್ದು, 'ಭದ್ರತಾ ವೈಫಲ್ಯವನ್ನು ಮುಚ್ಚಿಕೊಳ್ಳಲು ವಿಮಾನಯಾನ ಸಂಸ್ಥೆ ಪ್ಲಾಸ್ಟಿಕ್ ಹೊದಿಕೆ ಎಂದು ಹೇಳಿತ್ತು. ಆದರೆ ಪ್ರಾಥಮಿಕ ತನಿಖೆಯಿಂದ ವಿಮಾನದಲ್ಲಿ ಗ್ರೆನೇಡ್ ಪತ್ತೆಯಾಗಿರುವುದು ಸ್ಪಷ್ಟವಾಗಿದೆ. ಹೀಗಾಗಿ ಭದ್ರತಾ ವೈಫಲ್ಯದ ಮೇರೆಗೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಪ್ರಾಥಮಿಕ ಮಾಹಿತಿ ಕಲೆಹಾಕಿದ್ದು, ವಿಮಾನದಲ್ಲಿ ಪತ್ತೆಯಾಗಿರುವುದು ಪ್ಲಾಸ್ಟಿಕ್ ಹೊದಿಕೆ ಅಲ್ಲ ಗ್ರೆನೇಡ್ ಎಂದು ತಿಳಿದುಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜೆದ್ದಾಗೆ ಪ್ರಯಾಣಿಸ ಬೇಕಿದ್ದ ವೇಳೆ ಭದ್ರತಾ ವೈಫಲ್ಯವಾಗಿರುವುದು ನಿಜ. ಆದರೆ ವಿಮಾನದಲ್ಲಿ ಪತ್ತೆಯಾಗಿರುವುದು ಗ್ರೆನೇಡ್ ಅಲ್ಲ. ಪ್ಲಾಸ್ಟಿಕ್ ಹೊದಿಕೆಯಷ್ಟೇ. ಪ್ರಧಾನಿಗೆ ಬೆಂಗಾವಲಾಗಿ ಬರುವ ಯೋಧರು ಕೂಡ ತಮ್ಮ ಬಳಿಯ ಸ್ಫೋಟಗಳನ್ನು ನಿಷ್ಕ್ರಿಯಗೊಳಿಸುತ್ತಾರೆ. ಹೀಗಾಗಿ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಹೇಳಿಕೊಂಡಿತ್ತು. ಆದರೆ ಇದೀಗ ವಿಮಾನದಲ್ಲಿ ಗ್ರೆನೇಡ್ ಪತ್ತೆಯಾಗಿರುವುದು ಸ್ಪಷ್ಟಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement