ಪುದುಚ್ಚೇರಿ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ದೋಷಿ ಜಯಲಲಿತಾ ಅವರ ಬಂಧನವನ್ನು ವಿರೋಧಿಸಿ ಎಐಎಡಿಎಂಕೆ ಶನಿವಾರ ತಮಿಳ್ನಾಡಿನಲ್ಲಿ ಬಂದ್ಗೆ ಕರೆ ನೀಡಿದೆ. ಪುದುಚ್ಚೇರಿ, ಕರೈಕಲ್, ಮಾಹೆ ಮತ್ತು ಯಾನಮ್ನಲ್ಲಿ ಬಂದ್ಗೆ ಕರೆ ನೀಡಿರುಲ ಎಐಎಡಿಎಂಕೆ, ಜಯಾ ವಿರುದ್ಧ ವ್ಯಥಾರೋಪ ಹೊರಿಸಲಾಗಿದೆ ಎಂದು ಹೇಳಿದೆ.
ಜಯಾ ವಿರುದ್ಧ ಸುಳ್ಳು ಆರೋಪ ಹೊರಿಸಿ ಅವರನ್ನು ಜೈಲಿಗಟ್ಟಿರುವುದನ್ನು ವಿರೋಧಿಸಿ ಈ ಬಂದ್ಗೆ ಕರೆ ನೀಡಲಾಗಿದೆ ಎಂದು ಎಐಎಡಿಎಂಕೆ ಉಪ್ಪಲಂ ಟೌನ್ ಕಾರ್ಯದರ್ಶಿ ಎ ರವೀಂದ್ರನ್ ಹೇಳಿದ್ದಾರೆ.