ಕಾಲ್ತುಳಿತ: ಅವಾಂತರಕ್ಕೆ ಕಾರಣ ಮಂದ ಬೆಳಕು?
ದಸರಾ ಆಚರಣೆಯ ವೇಳೆ ಕಾಲ್ತುಳಿತ ಸಂಭವಿಸಿ 33 ಜನರ ಸಾವಿಗೆ ಹಾಗು 29 ಜನರಿಗೆ ಗಾಯವಾದ ಘಟನೆಗೆ...
ಪಾಟ್ನಾ: ದಸರಾ ಆಚರಣೆಯ ವೇಳೆ ಕಾಲ್ತುಳಿತ ಸಂಭವಿಸಿ 33 ಜನರ ಸಾವಿಗೆ ಹಾಗು 29 ಜನರಿಗೆ ಗಾಯವಾದ ಘಟನೆಗೆ ಗಾಂಧಿ ಮೈದಾನದಲ್ಲಿನ ಮಂದಬೆಳಕೇ ಕಾರಣ ಎಂದು ಹೇಳಲಾಗುತ್ತಿದೆ.
ಘಟನೆಯ ಬಗ್ಗೆ ತನಿಖೆ ನಡೆಸಿದ ತನಿಖಾ ತಂಡ ಘಟನಾಸ್ಥಳದಲ್ಲಿ ಮಂದ ಬೆಳಕು ಈ ಅವಾಂತರಕ್ಕೆ ಕಾರಣ ಎಂದು ಹೇಳಿದೆ.
ಗಾಂಧೀ ಮೈದಾನದಲ್ಲಿ ಸಾವಿರಾರು ಜನರು ಸೇರುವ ನಿರೀಕ್ಷೆ ಇತ್ತು ಎಂದು ಹೇಳಲಾಗುತ್ತಿದೆ. ಈ ದುರ್ಘಟನೆಯ ಬಗ್ಗೆ ರಾಜ್ಯ ಗೃಹ ಸಚಿವಾಲಯದ ಅಮಿರ್ ಶುಭಾಮಿ ಮತ್ತು ಪೊಲೀಸ್ ಎಡಿಜಿ ಗುಪ್ತೇಶ್ವರ್ ಪಾಂಡೆ ತನಿಖೆ ನಡೆಸಿದ್ದಾರೆ.
ಶುಕ್ರವಾರ ಗಾಂಧಿ ಮೈದಾನದಲ್ಲಿ ರಾವಣ ದಹನ ಮಾಡುವಾಗ ಈ ದುರ್ಘಟನೆ ನಡೆದಿತ್ತು.