'ಮಹಾ' ಚುನಾವಣೆ: ಎಂಎನ್ಎಸ್ ನಿಂದ ಉತ್ತರ ಭಾರತೀಯನಿಗೆ ಟಿಕೆಟ್
ಉತ್ತರ ಭಾರತೀಯರ ಮೇಲೆ ಸದಾ ಕಿಡಿಕಾರುತ್ತಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್)...
ಮುಂಬೈ: ಉತ್ತರ ಭಾರತೀಯರ ಮೇಲೆ ಸದಾ ಕಿಡಿಕಾರುತ್ತಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಈ ಬಾರಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಉತ್ತರಭಾರತೀಯನೊಬ್ಬನಿಗೆ ಟಿಕೆಟ್ ನೀಡಿದೆ.
ಅಕ್ಟೋಬರ್ 15ರಂದು ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಉತ್ತರ ಪ್ರದೇಶದ ಜೌನ್ಪುರ್ ಮೂಲದ ಅಖಿಲೇಶ್ ಚೌಬೇ ಎಂಬವರಿಗೆ ಕಾಂಡಿವಲಿ (ಪೂರ್ವ) ವಿಧಾನಸಭಾ ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಎಂಎನ್ಎಸ್ ಟಿಕೆಟ್ ನೀಡಿದೆಯ
ಈ ಮೂಲಕ ಇದೇ ಮೊದಲ ಬಾರಿಗೆ ಮುಂಬೈಯಲ್ಲಿ ಎಂಎನ್ಎಸ್ ಟಿಕೆಟ್ನಿಂದ ಚುನಾವಣಾ ಕಣಕ್ಕಿಳಿದಿರುವ ಉತ್ತರಭಾರತೀಯರಾಗಿದ್ದಾರೆ ಚೌಬೇ.
ವೃತ್ತಿಯಲ್ಲಿ ನ್ಯಾಯವಾದಿಯಾಗಿರುವ ಚೌಬೇ ತಮ್ಮ ಪಕ್ಷ ಯಾವುದೇ ಸಮುದಾಯದ ವಿರೋಧಿಯಲ್ಲ, ರಾಜ್ಯದ ಪ್ರಗತಿಗೆ ದುಡಿಯುವವರನ್ನು ಇದು ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.