ಸಹನಟಿ ಐಶ್ವರ್ಯ ಕಾರಿನ ಮೇಲೆ ಕಲ್ಲು ತೂರಾಟ
ದಾವಣಗೆರೆ: ಸಿಂಹಾದ್ರಿ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದ ಸಹ ನಟಿ ಐಶ್ವರ್ಯ ಅವರ ಕಾರಿನ ಮೇಲೆ ದುಷ್ಕರ್ಮಿಗಳು ಕಳೆದ ರಾತ್ರಿ ಕಲ್ಲು ತೂರಾಟ ನಡೆಸಿದ್ದಾರೆ.
ದಾವಣಗೆರೆಯ ಪುಷ್ಪಾಂಜಲಿ ಟಾಕೀಸ್ನಲ್ಲಿ ಸಿಂಹಾದ್ರಿ ಸಿನಿಮಾ ನೋಡಿಕೊಂಡು ರಾತ್ರಿ ಸುಮಾರು 10.30ರ ಸುಮಾರಿಗೆ ಹೊರಗಡೆ ಬರುತ್ತಿದ್ದಂತೆ ದುಷ್ಕರ್ಮಿಗಳು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಪರಿಣಾಮ ಸ್ಕಾರ್ಪಿಯೋ ಕಾರಿನ ಹಿಂಬಂದಿಯ ಸೈಡ್ ಗಾಜು ಪುಡಿ ಪುಡಿಯಾಗಿದೆ. ಆದರೆ ಸಹನಟಿ ಐಶ್ವರ್ಯ ಹಾಗೂ ಅವರ ತಂದೆ ತಾಯಿಗಳಿಗೆ ಯಾವುದೇ ಗಾಯಗಳಾಗಿಲ್ಲ.
ತಮ್ಮ ವಿರುದ್ಧ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಕೂಡಲೇ ಐಶ್ವರ್ಯ ನಟ ದುನಿಯಾ ವಿಜಿಗೆ ಕರೆ ಮಾಡಿ ಸುದ್ದಿ ತಿಳಿಸಿದ್ದಾರೆ ಕೂಡಲೇ ಸ್ಥಳಕ್ಕಾಗಮಿಸಿದ ನಟ ದುನಿಯಾ ವಿಜಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸದ್ಯ ಕಲ್ಲು ತೂರಾಟ ನಡೆಸಿದ್ದು ಯಾರೆಂಬುದು ತಿಳಿದುಬಂದಿಲ್ಲ.
ನಟಿ ಐಶ್ವರ್ಯ ಪ್ರತಿಕ್ರಿಯೆ
ಕಳೆದ ರಾತ್ರಿ ದಾವಣಗೆರೆಯ ಪುಷ್ಪಾಂಜಲಿ ಟಾಕೀಸ್ನಲ್ಲಿ ಸಿಂಹಾದ್ರಿ ಚಿತ್ರವನ್ನು ನೋಡಿಕೊಂಡು ಹೊರಗಡೆ ಬಂದು ಕಾರು ಹತ್ತುತ್ತಿದಂತೆ ಯಾರೇ ದುಷ್ಕರ್ಮಿಗಳು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದರು. ಕಲ್ಲುಗಳು ಕಾರಿನ ಹಿಂಬದಿಯ ಸೈಡ್ ಗಾಜಿಗೆ ತಗುಲಿ ಪುಡಿಯಾಗಿದೆ. ಸದ್ಯ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ನಮ್ಮ ತಂದೆಗೆ ಕಲ್ಲು ಬಡಿಯಲಿಲ್ಲ ಎಂದರು. ನಾನು ಕೂಡಲೇ ವಿಜಿ ಅವರಿಗೆ ಸುದ್ದಿ ತಿಳಿಸಿದೆ. ಕೂಡಲೇ ಬಂದ ಅವರು ಪರಿಸ್ಥಿತಿ ಮುದಗೊಳಿಸಿದ್ದು, ನಂತರ ಪೊಲೀಸರಿಗೆ ದೂರು ನೀಡುವಂತೆ ತಿಳಿಸಿದರು ಎಂದರು.