ಜಮ್ಮು: 40 ಬಿಎಸ್‌ಎಫ್ ಪೋಸ್ಟ್ ಮೇಲೆ ಪಾಕ್ ಕಣ್ಣು
ಸೋಮವಾರ ರಾತ್ರಿ ಜಮ್ಮು ಗಡಿಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ...
ಜಮ್ಮು: ಸೋಮವಾರ ರಾತ್ರಿ ಜಮ್ಮು ಗಡಿಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕ್ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ 9 ನಾಗರಿಕರು ಮೃತಪಟ್ಟಿದ್ದು, ಹಲವಾರು ಮಂದಿಗೆ ಗಾಯಗಳಾಗಿವೆ.
ಪಾಕ್ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಈ ಬಗ್ಗೆ ಮಂಗಳವಾರ ಭಾರತ ಮತ್ತು ಪಾಕಿಸ್ತಾನದ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಶನ್ಸ್ (ಡಿಜಿಎಂಓ) ಗಳು ಮಾತುಕತೆ ನಡೆಸಲಿದ್ದಾರೆ.
ಈ ತಿಂಗಳಲ್ಲಿ 17 ಬಾರೀ ಪಾಕ್ ಕದನ ವಿರಾಮ ಉಲ್ಲಂಘಿಸಿದ್ದು, 40 ಬಾರ್ಡರ್ ಔಟ್ ಪೋಸ್ಟ್‌ಗಳ ಮೇಲೆ ಪಾಕ್ ಗುರಿ ನೆಟ್ಟಿದೆ. ಸೋಮವಾರ ರಾತ್ರಿ ಪಾಕ್ ಸೇನೆ 10 ಬಾರ್ಡರ್ ಪೋಸ್ಟ್ ಗಳು ಮತ್ತು ಜನವಸತಿ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಶೆಲ್ ಹಾಗು ಗುಂಡಿನ ದಾಳಿ ನಡೆಸಿತ್ತು.
ಪಾಕ್‌ನ ಈ ಉದ್ಧಟತನಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದ್ದು, ಈಗಲೂ ಕೆಲವು ಪ್ರದೇಶಗಳಲ್ಲಿ ಗುಂಡಿನ ದಾಳಿ ನಡೆಯುತ್ತಿದೆ ಎಂದು ವರದಿಯಾಗಿದೆ.