ಕಲ್ಪಕಂ ಅಣುಸ್ಥಾವರದಲ್ಲಿ ಶೂಟೌಟ್: 3 ಸಿಐಎಸ್ಎಫ್ ಸಿಬ್ಬಂದಿ ಹತ್ಯೆ
ತಮಿಳುನಾಡಿನ ಕಲ್ಪಕಂ ಅಣುಸ್ಥಾವರದಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಬುಧವಾರ ವರದಿಯಾಗಿದೆ...
ಚೆನ್ನೈ: ತಮಿಳುನಾಡಿನ ಕಲ್ಪಕಂ ಅಣುಸ್ಥಾವರದಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಬುಧವಾರ ವರದಿಯಾಗಿದೆ.
ಬೆಳಗ್ಗೆ 5.30ಕ್ಕೆ ಈ ಘಟನೆ ನಡೆದಿರುವುದಾಗಿ ಬಲ್ಲಮೂಲಗಳು ಹೇಳಿವೆ.
ಸಿಐಎಸ್‌ಎಫ್‌ನ (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ವಿಜಯ್ ಪ್ರತಾಪ್ ಸಿಂಗ್ ಎಂಬಾತ ಗುಂಡಿನ ದಾಳಿ ನಡೆಸಿದ್ದು, ಮೂವರು ಸಹೋದ್ಯೋಗಿಗಳನ್ನು ಹತೈಗೈದಿದ್ದಾನೆ. ಈ ಗುಂಡಿನ ದಾಳಿಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ವಿಜಯ್ ಪ್ರತಾಪ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯಕ್ಕೆ ಕಾರಣ ಏನು ಎಂಬುದು ಸದ್ಯ ತಿಳಿದುಬಂದಿಲ್ಲ.