ಮಹಿಳೆಗೂ ವಿವಾಹ ವಯಸ್ಸು 21 ಇರಲಿ
ಪುರುಷ ಮತ್ತು ಮಹಿಳೆಯರಿಗೆ ವಿವಾಹದ ವಯಸ್ಸು ಬೇರೆ ಬೇರೆ...
-ಪುರುಷನಿಗಿಂತ ಮಹಿಳೆಯೇ ಪ್ರೌಢವಸ್ಥೆಗೆ ಬರುವ ವಾದ ಎಷ್ಟು ಸರಿ?
ಮಧುರೆ: ಪುರುಷ ಮತ್ತು ಮಹಿಳೆಯರಿಗೆ ವಿವಾಹದ ವಯಸ್ಸು ಬೇರೆ ಬೇರೆ ಏಕಿಸಬೇಕು? ಹುಡುಗರು ಮತ್ತು ಹುಡುಗಿಯರು 17 ವರ್ಷದ ವರೆಗೆ ಶಾಲೆಯಲ್ಲಿ ಒಂದೇ ವಾತಾವರಣದಲ್ಲಿ ಬೆಳೆದಿರುತ್ತಾರೆ.
ಹೀಗಿರುವಾಗ 18 ವರ್ಷ ತುಂಬಿದಾಗ ಹುಡುಗರಿಗಿಂತ ಹುಡುಗಿಯರೇ ಹೆಚ್ಚು ಪ್ರೌಢಾವಸ್ಥೆಗೆ ಬಂದಿದ್ದಾರೆ ಎಂದು ತೀರ್ಮಾನಕ್ಕೆ ಬರುವುದು ಸರಿಯೇ?
ಹೀಗೆಂದು ಪ್ರಶ್ನಿಸಿದ್ದು ಮದ್ರಾಸ್ ಹೈಕೋರ್ಟ್ನ ಮದುರೆ ಪೀಠದ ನ್ಯಾ.ಎಸ್ ಮಣಿಕುಮಾರ್ ಮತ್ತು ನ್ಯಾ.ವಿ.ಎಸ್. ರವಿ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯೊಂದರೆ ವೇಳೆ ಈ ರೀತಿ ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಪುರುಷರಿಗೆ ಮತ್ತು ಮಹಿಳೆಯ ವಯಸ್ಸಿನ ತಾರತಮ್ಯ ಏಕೆ. ಈ ನಿಟ್ಟಿನಲ್ಲಿ ಕಾನೂನು ತಿದ್ದುಪಡಿಯಾಗುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು.
ಹಿಂದೂ ವಿವಾಹ ಕಾಯ್ದೆಯಲ್ಲಿ ಪುರುಷನಿಗೆ 21 ಮತ್ತು ಮಹಿಳೆಗೆ 18 ವಿವಾಹ ಯೋಗ್ಯ ವಯಸ್ಸು ಎಂದು ನಿಗದಿ ಮಾಡಿದೆ. ಹಾಗಿದ್ದರೆ ಪುರುಷನಿಗಿಂತ ಮಹಿಳೆಯೇ ಮೊದಲಾಗಿ ಮಾನಸಿಕವಾಗಿ, ಸಾಮಾಜಿಕವಾಗಿ ಪ್ರೌಢಿಮೆಗೆ ಬಂದಿರುತ್ತಾಳೆ ಎನ್ನುವ ವಾದ ಎಷ್ಟರ ಮಟ್ಟಿಗೆ ಸರಿ ಎಂದು ಅಚ್ಚರಿಪಟ್ಟಿತು.
ಹದಿಹರೆಯದ ಆಕರ್ಷಣೆಯಿಂದಾಗಿ ಹೆಣ್ಣುಮಕ್ಕಳು ತಮ್ಮ ಪ್ರೀತಿ ಪಾತ್ರರ ಜತೆ ಓಡಿ ಹೋಗುತ್ತಾರೆ. ಕೇವಲ ಆಕರ್ಷಣೆಯಿಂದಾಗಿ ಪ್ರೇಮದ ಬಲೆಗೆ ಬೀಳುತ್ತಾರೆ ಎನ್ನುವುದು ಪೋಷಕರ ವಾದ. ಇದರ ಜತೆಗ ಹೆತ್ತವರ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ತಮ್ಮನ್ನು ಪ್ರೀತಿಯಿಂದ ಯಾರಾದರೂ ನೋಡಿಕೊಳ್ಳುತ್ತಾರೆಯೋ ಎಂಬ ಭಾವನೆ ಹುಡುಗಿಯರನ್ನು ಕಾಡುತ್ತದೆ ಎಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿತು.
ಸಾಧ್ಯವಿಲ್ಲ: ಎಲ್ಲ ಕಾಲದಲ್ಲೂ ಹೆತ್ತವರಿಗೆ ಪುತ್ರಿಯನ್ನು ಗಮನಿಸಲು ಸಾಧ್ಯವಿಲ್ಲ. ಅವರ ಮೇಲೆ ಟಿವಿ ಚಾನೆಲ್ಗಳು ಪ್ರಭಾವ ಬೀರುತ್ತವೆ. ಹೀಗಾಗಿ ಯುವಿತಿಯರೂ ಕೂಡ ತಮ್ಮ ಇಷ್ಟದಂತೆ ಮದುವೆಯಾಗಿರುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ಹೆತ್ತವರಿಗೆ ಇರಿಸು ಮುರಿಸು ಆಗುವುದೂ ಇಷ್ಟವಿಲ್ಲ. ಹೀಗಾಗಿ, ಮಹಿಳೆಯರ ವಿವಾಹ ವಯೋವುತಿ ಹೆಚ್ಚಿಸುವುದು ಸೂಕ್ತ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಡ್ರೈವ್ ಮಾಡಿದಂತಲ್ಲ
ಸೂಕ್ತ ಶಿಕ್ಷಣ ಪಡೆದ ಬಳಿಕ 18 ವರ್ಷ ತುಂಬಿದ ಯುವತಿಗೆ ಕೆಲಸ ಸಿಗುತ್ತದೆ. ಜತೆಗೆ ವಾಹನ ಚಲಾಯಿಸುವ ಕಾನೂನು ಬದ್ಧ ಅವಕಾಶವೂ ಸಿಗುತ್ತದೆ. ಆದರೆ ವಿವಾಹ ಬಂಧನಕ್ಕೆ ಒಳಗಾಗಲು ಮಾನಸಿಕವಾಗಿ ಅವರು ಸಿದ್ಧರಿರುವುದಿಲ್ಲ. ಹೀಗಾಗಿ ವಯೋವುತಿಯನ್ನು 21ಕ್ಕೆ ಹೆಚ್ಚಿಸುವುದು ಸೂಕ್ತ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.