ವಿಶಾಖ ಪಟ್ಟಣಂ ಕರಾವಳಿಯಲ್ಲಿ ಹೈ ಅಲರ್ಟ್
ಹುಡ್‌ಹುಡ್ ಚಂಡಮಾರುತ ವಿಖಾಖಪಟ್ಟಣಂನಿಂದ 550 ಕಿ.ಮೀ ದೂರದಲ್ಲಿದ್ದು, ಅಕ್ಟೋಬರ್ 12ರ ವೇಳೆಗೆ...
ನವದೆಹಲಿ/ ವಿಶಾಖಪಟ್ಟಣಂ: ಹುಡ್‌ಹುಡ್ ಚಂಡಮಾರುತ ವಿಖಾಖಪಟ್ಟಣಂನಿಂದ 550 ಕಿ.ಮೀ ದೂರದಲ್ಲಿದ್ದು, ಅಕ್ಟೋಬರ್ 12ರ ವೇಳೆಗೆ ವಿಶಾಖಪಟ್ಟಣಂನತ್ತ ಲಗ್ಗೆಯಿಡಲಿದೆ.
ಭಾರತೀಯ ಪವನಶಾಸ್ತ್ರ ಇಲಾಖೆ ಇಂದು ಬೆಳಗ್ಗೆ ಪ್ರಕಟಿಸಿದ ವರದಿಯಲ್ಲಿ ಹುಡ್ ಹುಡ್ ಚಂಡಮಾರುತ ಬಂಗಾಳ ಕೊಲ್ಲಿಯಿಂದ ಬೀಸುತಲಿದ್ದು, ವಿಶಾಖಪಟ್ಟಣಂನಿಂದ 590 ಕಿ.ಮೀ ದೂರದಲ್ಲಿದೆ ಎಂದು ಹೇಳಿದೆ.
ಮುಂದಿನ 12 ಗಂಟೆಗಳಲ್ಲಿ ಚಂಡಮಾರುತವು ಪಶ್ಚಿಮ- ವಾಯವ್ಯ ದಿಕ್ಕಿನಲ್ಲಿ ಚಲಿಸಲಿದೆ ಎಂದು ಪವನಶಾಸ್ತ್ರ ಇಲಾಖೆ ಹೇಳಿದೆ.
ಆಂಧ್ರ ಕರಾವಳಿ ಜಿಲ್ಲೆಗಳಾದ ಪೂರ್ವ ಗೋದಾವರಿ, ವಿಶಾಖಪಟ್ಟಣಂ, ವಿಜಯನಗರಂ ಮತ್ತು ಶ್ರೀಕಾಕುಲಂನಲ್ಲಿ ಚಂಡಮಾರುತದ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಈ ಪ್ರದೇಶಗಳಲ್ಲಿ ನಾಳೆ ಸಂಜೆಯವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಪವನಶಾಸ್ತ್ರ ಇಲಾಖೆ ಹೇಳಿಕೆ ನೀಡಿದೆ