ಏಡ್ಸ್ ನಂತರ ಎಬೋಲಾ ಮಹಾಮಾರಿಯಾಗಲಿದೆ: ಅಮೆರಿಕ
ಎಬೋಲಾ ವೈರೆಸ್ ಹರಡುವುದನ್ನು...
ಮ್ಯಾಂಡ್ರಿಡ್: ಎಬೋಲಾ ವೈರೆಸ್ ಹರಡುವುದನ್ನು ತಡೆಗಟ್ಟಲು ಕ್ಷಿಪ್ರ ಕ್ರಮಕೈಗೊಳ್ಳುವಂತೆ ಅಮೆರಿಕದ ಆರೋಗ್ಯ ಇಲಾಖಾ ಅಧಿಕಾರಿಗಳು ಇತರ ರಾಷ್ಟ್ರಗಳಿಗೆ ಹೇಳಿವೆ.
ಆಫ್ರಿಕಾದಿಂದ ಹೊರಗೂ ಎಬೋಲಾ ವೈರೆಸ್ ಹರಡಿದ್ದು, ಮ್ಯಾಂಡ್ರಿಡ್ನಲ್ಲಿರುವ ಸ್ಪ್ಯಾನಿಷ್ ದಾದಿಯೊಬ್ಬಳಿಗೆ ಎಬೋಲಾ ಬಾಧಿಸಿರುವುದಾಗಿ ಪತ್ತೆಯಾಗಿದೆ.
ಪ್ರಸ್ತುತ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಎಬೋಲಾ ಬಾಧಿಸಿ 3,900ಕ್ಕಿಂತಲೂ ಹೆಚ್ಚು ಜವರು ಸಾವನ್ನಪ್ಪಿದ್ದಾರೆ. ಇದೀಗ ಅಮೆರಿಕಾದಲ್ಲೂ ರೋಗ ಪತ್ತೆಯಾಗಿರುವುದರಿಂದ ಈ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾದ ಅಗತ್ಯವಿದೆ ಎಂದು ಅಮೆರಿಕ ಹೇಳಿದೆ.
ಇದೀಗ ಅಮೆರಿಕ, ಕೆನಡಾ ಮತ್ತು ಬ್ರಿಟನ್ ದಕ್ಷಿಣ ಆಫ್ರಿಕಾದಿಂದ ಆಗಮಿಸುವ ಜನರನ್ನು ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ತಪಾಸಣೆಗೊಳಪಡಿಸುತ್ತಿದೆ.
ಎಬೋಲಾ ವೈರೆಸ್ ಹರಡುವಿಕೆಯನ್ನು ತಡೆಗಟ್ಟದೇ ಇದ್ದರೆ ಜನವರಿ ತಿಂಗಳ ಹೊತ್ತಿಗೆ ಪ್ರಕರಣಗಳ ಸಂಖ್ಯೆ 1.4 ಮಿಲಿಯನ್ ಆಗಲಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ನಿವಾರಣಾ ಕೇಂದ್ರ ಹೇಳಿದೆ.
ದೇಹದಲ್ಲಿ ಸ್ರವಿಸುವ ದ್ರವ್ಯದಿಂದ ಈ ರೋಗ ಪರಸ್ಪರ ಹರಡುತ್ತಿದೆ. ಆದ್ದರಿಂದ ಆದಷ್ಟು ಬೇಗ ಎಬೋಲಾ ಪಸರಿಸುವುದನ್ನು ತಡೆಯಬೇಕು. ಇಲ್ಲವಾದರೆ ಏಡ್ಸ್ ನಂತರ ಎಬೋಲಾ ಜಗತ್ತಿನ ಮಹಾಮಾರಿಯಾಗಿ ಪರಿಣಮಿಸಲಿದೆ ಎಂದು ಸಿಡಿಸಿ ಡೈರಕ್ಟರ್ ಟೋಮ್ ಫ್ರೈಡೇನ್ ಹೇಳಿದ್ದಾರೆ.