ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹುಡ್‌ಹುಡ್ ಎಫೆಕ್ಟ್: ರಾಜ್ಯದಲ್ಲಿ ಪವರ್‌ಕಟ್

ಆಂಧ್ರದಲ್ಲಿ ಹುಡ್‌ಹುಡ್ ಚಂಡಮಾರುತ ಪರಿಣಾಮ ಹಾಗೂ ಉಷ್ಣ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಕೊರತೆ ಹಿನ್ನೆಲೆ ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್...

Vishwanath S
Updated On : 12 Oct 2014, 7:16 am

ಬೆಂಗಳೂರು: ಹುಡ್‌ಹುಡ್ ಚಂಡಮಾರುತ ಪರಿಣಾಮ ಹಾಗೂ ಉಷ್ಣ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಕೊರತೆ ಹಿನ್ನೆಲೆ ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್ ಜಾರಿಗೆ ಸರ್ಕಾರ ಮುಂದಾಗಿದೆ.

ಆಂಧ್ರದ ಕರಾವಳಿಯಿಂದ ಪೂರೈಕೆಯಾಗುತ್ತಿದ್ದ 1700 ಮೆಗಾವ್ಯಾಟ್ ಪೈಕಿ 1000 ಮೆಗಾವ್ಯಾಟ್ ವಿದ್ಯುತ್ ಸರಬರಾಜಾಗುತ್ತಿತ್ತು. ಅದರಂತೆ ಉಷ್ಣ ವಿದ್ಯುತ್ ಸ್ಥಾವರದಿಂದ ಶೇ. 18ರಷ್ಟು ವಿದ್ಯುತ್‌ನಲ್ಲಿ ಕೊರತೆ ಎದುರಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಲೋಡ್‌ಶಿಡ್ಡಿಂಗ್ ಅನಿವಾರ್ಯವಾಗಿದೆ ಎಂದು ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ವಿದ್ಯುತ್ ಕೊರತೆ ಹಿನ್ನೆಲೆಯಲ್ಲಿ ಆನಂದರಾವ್ ವೃತ್ತದ ಕೆಪಿಟಿಸಿಎಲ್ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ಕರ್ನಾಟಕದಲ್ಲಿ ಶೇಕಡ. 25 ರಷ್ಟು ವಿದ್ಯುತ್ ಕೊರತೆ ಎದುರಾಗಿದೆ ಹೀಗಾಗಿ ರಾಜ್ಯದಲ್ಲಿ ಈಗಿನಿಂದಲೇ ಲೋಡ್‌ಶೆಡ್ಡಿಂಗ್ ಜಾರಿ ಮಾಡುವ ಅನಿರ್ವಾಯ ಎದುರಾಗಿದೆ ಎಂದರು.

ಲೋಡ್ ಶೆಡ್ಡಿಂಗ್ ವಿವರ:
ನಗರ ಪ್ರದೇಶದಲ್ಲಿ ದಿನಕ್ಕೆ 2 ಗಂಟೆ ಲೋಡ್ ಶೆಡ್ಡಿಂಗ್.
ಜಿಲ್ಲಾ ಕೇಂದ್ರಗಳಲ್ಲಿ ಪ್ರತಿ ದಿನ 4 ಗಂಟೆ ವಿದ್ಯುತ್ ಸ್ಥಗಿತ.
ಗ್ರಾಮೀಣ ಭಾಗದಲ್ಲಿ ಪ್ರತಿ ದಿನ 15 ಗಂಟೆ ವಿದ್ಯುತ್ ಸ್ಥಗಿತ, ಇನ್ನು ಕೇವಲ 5 ಗಂಟೆ ಮಾತ್ರ ವಿದ್ಯುತ್.
ದಿನದಲ್ಲಿ 5 ಗಂಟೆಗಳ ಕಾಲ ಮಾತ್ರ 3 ಫೇಸ್ ವಿದ್ಯುತ್.
ಗ್ರಾಮೀಣ ಭಾಗದಲ್ಲಿ ದಿನಕ್ಕೆ 10 ಗಂಟೆ ಲೋಡ್ ಶೆಡ್ಡಿಂಗ್.
ಗ್ರಾಮೀಣ ಭಾಗದಲ್ಲಿ ದಿನದಲ್ಲಿ 4 ರಿಂದ 6 ಗಂಟೆ ಮಾತ್ರ ಸಿಂಗಲ್ ಫೇಸ್ ವಿದ್ಯುತ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement