ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರೌಡಿ ಕವಳ ಹತ್ಯೆ ಆರೋಪಿ ನಖ್ರಾ ಬಾಬುನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

Vishwanath S
Updated On : 12 Oct 2014, 5:23 am

ಬೆಂಗಳೂರು: ನಗರದ ಬಿಟಿಎಂ ಲೇಔಟ್ ಬಳಿಯ ಜೈಭೀಮ್ ನಗರದಲ್ಲಿ ಹಾಡಹಗಲೇ ರೌಡಿಗಳು ಅಟ್ಟಹಾಸ ಮೆರೆದಿದ್ದು, ರೌಡಿ ಕವಳ ಹತ್ಯೆ ಆರೋಪಿ ನಖ್ರಾ ಬಾಬು ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ  ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಕವಳ ಅಲಿಯಾಸ್ ವಿಜಯ್ ಕುಮಾರ್ ಕೊಲೆಯ ಪ್ರಮುಖ ಆರೋಪಿಯಾಗಿದ್ದ ನಖ್ರಾ ಬಾಬು ಮೇಲೆ ದುಷ್ಕಮಿಗಳು ಇಂದು ದಾಳಿ ನಡೆಸಿ ಮಾರಕಾಸ್ಕ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಜತೆಗಿದ್ದ ವಿಶ್ವ, ಹೀರಾಲಾಲ್‌ಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಸಿಲಿದ್ದಾರೆ.

ಘಟನಾ ಸ್ಥಳಕ್ಕೆ ಮಡಿವಾಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೌಡಿ ಕವಳನ ಹತ್ಯೆಗೆ ಪ್ರತಿಕಾರವಾಗಿ ನಖ್ರಾ ಬಾಬು ಮೇಲೆ ದಾಳಿ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕವಳನ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ನಖ್ರಾ ಬಾಬುನನ್ನು ಬಂಧಿಸಲಾಗಿತ್ತು. ನಂತರ ಜಾಮೀನು ಪಡೆದು ಹೊರಬಂದಿದ್ದರು.

ಸಂಧಾನ ಮಾತುಕತೆ ವಿಫಲ
ಕವಳ ಹತ್ಯೆಗೆ ಪ್ರತಿಕಾರವಾಗಿ ನಖ್ರಾ ಬಾಬು ಮೇಲೆ ಹತ್ಯೆಗೆ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ಇಂದು ನಂಜುಂಡ ಎಂಬುವರ ನೇತೃತ್ವದಲ್ಲಿ ಜೈಭೀಮ್ ನಗರದಲ್ಲಿನ ಕುಮಾರ್ ಎಂಬುವರ ಮನೆಯಲ್ಲಿ ಸಂಧಾನ ಮಾತುಕತೆಗೆ ಸೇರಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಸಿದೆ. ಈ ವೇಳೆ ನಂಜುಂಡನ 12 ಮಂದಿ ರೌಡಿಗಳು ನಖ್ರಾ ಬಾಬು ಹಾಗೂ ಆತನ ಸಹಚರರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.

ಕವಳ ಹತ್ಯೆ
ಕವಳ ಅಲಿಯಾಸ್ ವಿಜಯ್ ಕುಮಾರ್‌ನನ್ನು ಬೆಂಗಳೂರು ಹೊರವಲಯದ ಹೊಸೂರು ರಸ್ತೆಯಲ್ಲಿ ಇನ್ನೊವಾ ಕಾರಿನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿ ಕೊಲೆಗೈದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಕವಳ ರಸ್ತೆಯಲ್ಲೇ ಮೃತಪಟ್ಟಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement