ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಗುಜರಾತ್ ಕರಾವಳಿಯಲ್ಲಿ 14 ಪಾಕ್ ಮೀನುಗಾರರ ಬಂಧನ

ಗುಜರಾತ್ ಕರಾವಳಿಗೆ ಬಂದಿಳಿದ ಪಾಕಿಸ್ತಾನದ 14 ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ....

ಸಾಂದರ್ಭಿಕ ಚಿತ್ರ
Rashmi Kasaragodu
Updated On : 16 Oct 2014, 12:06 pm

ಅಹ್ಮದಾಬಾದ್: ಗುಜರಾತ್ ಕರಾವಳಿಗೆ ಬಂದಿಳಿದ ಪಾಕಿಸ್ತಾನದ 14 ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಬುಧವಾರ ಬಂಧಿಸಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

ಮೀತಾ ಬಂದರಿನಿಂದ ಸ್ವಲ್ಪ ದೂರದಲ್ಲಿ ಪಾಕಿಸ್ತಾನದ ಮೀನುಗಾರರ ಗುಲ್‌ಸಮಾಲ್ ಎಂಬ ದೋಣಿ  ಅಕ್ರಮವಾಗಿ ಪ್ರವೇಶಿಸುತ್ತಿರುವುದನ್ನು ಓಕಾದಲ್ಲಿ ನಿಲ್ಲಿಸಲಾಗಿದ್ದ ಐಎನ್‌ಜಿ ವಾಯುವ್ಯ ಪ್ರದೇಶ ಮೂಲದ ನೌಕೆ ಪತ್ತೆ ಹಚ್ಚಿತ್ತು.

ಐಜಿಸಿ ಪಾಕ್ ನೌಕೆಯನ್ನು ಪತ್ತೆ ಮಾಡಿದ ಕೂಡಲೇ ಗುಲ್‌ಸಮಾಲ್ ದೋಣಿಯಲ್ಲಿದ್ದ ಮೀನುಗಾರರು ಅಲ್ಲಿಂದ ಪಲಾಯನಗೈಯಲು ಯತ್ನಿಸಿದ್ದಾರೆ. ಆ ವೇಳೆ ಐಜಿಸಿ ನೌಕೆಯಲ್ಲಿದ್ದ ಅಧಿಕಾರಿಗಳು 5 ಬಾರಿ ಎಚ್ಚರಿಕೆ ಗುಂಡು ಹಾರಿಸಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ದೋಣಿಯನ್ನು ವಶಕ್ಕೆ ತೆಗೆದುಕೊಂಡ ಭಾರತೀಯ ಅಧಿಕಾರಿಗಳು ದೋಣಿಯಲ್ಲಿದ್ದ 14 ಮಂದಿ ಮೀನುಗಾರರನ್ನು ಬಂಧಿಸಿದ್ದು, ಸಮುದ್ರ ಗಡಿ ಉಲ್ಲಂಘನೆ ಭಾರತೀಯ ಕಾಯ್ದೆ 1981 ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ ಎಂದು ರಕ್ಷಣಾ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement