ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಇಸ್ರೋದಿಂದ ಮತ್ತೊಂದು ಮಹತ್ವದ ಸಾಧನೆ, ಐಆರ್‏ಎನ್‏ಎಸ್ಎಸ್ ೧-ಸಿ ಯಶಸ್ವಿ ಉಡಾವಣೆ

ಇಸ್ರೋ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು, ಇಸ್ರೋದ ಪಿಎಸ್ಎಲ್ ವಿ, ಸಿ -೨೬ ರಾಕೆಟ್ ನಿಂದ ಐಆರ್ ಎನ್...

Updated On : 16 Oct 2014, 1:26 am

ಶ್ರೀಹರಿಕೋಟ: ಇಸ್ರೋ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು, ಇಸ್ರೋದ ಪಿಎಸ್ಎಲ್ ವಿ, ಸಿ -೨೬ ರಾಕೆಟ್ ನಿಂದ ಐಆರ್‏ಎನ್‏ಎಸ್ಎಸ್ ೧-ಸಿ ಉಪಗ್ರಹವನ್ನು ಇಂದು ಬೆಳಗ್ಗೆ ೧:೩೨ ಕ್ಕೆ  ಯಶಸ್ವಿಯಾಗಿ  ಉಡಾಯಿಸಿದೆ. ಅಮೇರಿಕಾದ ಜಿಪಿಎಸ್ ವ್ಯವಸ್ಥೆಗೆ ಸರಿ ಸಮನಾಗಿ ಇದು ದೇಶದ ತನ್ನದೇ ಆದ ಸಂಚಾರ ಯಾನ ವ್ಯವಸ್ಥೆಯನ್ನು (ನ್ಯಾವಿಗೇಶನ್ ಸಿಸ್ಟಂ) ಸ್ಥಾಪಿಸಲು ಒಂದು ಹೆಜ್ಜೆ ಹತ್ತಿರವಾದಂತೆ.

 ಐಆರ್‏ಎನ್‏ಎಸ್ಎಸ್ ೧-ಸಿ, ಇಸ್ರೋ ಉಡಾಯಿಸಲಿರುವ ಏಳು ಉಪಗ್ರಹಗಳಲ್ಲಿ ಮೂರನೆಯದಾಗಿದೆ. ಇದು ಭಾರತೀಯ ಪ್ರಾದೇಶಿಕ ಯಾನ ಸಂಚಾರಿ ಉಪಗ್ರಹ  ವ್ಯವಸ್ಥೆಯನ್ನು (ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸಟ್ಟಲೈತ್ ಸಿಸ್ಟಮ್) ಸ್ಥಾಪಿಸಲು ಸಹಕಾರಿಯಾಗಲಿದೆ.

ಶ್ರೀಹರಿಕೋಟದ ಉಡಾಯನ ಕ್ಷೇತ್ರದಿಂದ ೧:೩೨ ಕ್ಕೆ ಸರಿಯಾಗಿ ಚಿಮ್ಮಿದ ರಾಕೆಟ್ ರಾತ್ರಿ ಆಕಾಶದಲ್ಲಿ ಬೆಂಕಿಯಿಂದ ಬಣ್ಣ ಬಳಿದು, ನೋಡುಗರ ಕಣ್ಮನ ಸೆಳೆಯಿತು.

ಇಪ್ಪತ್ತು ನಿಮಿಷದ ನಂತರ, ರಾಕೆಟ್ ತಾನು ಹೊತ್ತಿದ್ದ ೧೪೨೫.೪ ಕೆಜಿಯ ಉಪಗ್ರವನ್ನು ಸರಿಯಾದ ಕಕ್ಷೆಗೆ ಸೇರಿಸಿತು.

ಇಸ್ರೋ ನಿರ್ದೇಶಕ ಕೆ. ರಾಧಾಕೃಷ್ಣನ್ ಈ ಯೋಜನೆಯಲ್ಲಿ ಕೆಲಸ ಮಾಡಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.

ಇಸ್ರೋ ಮೂಲಗಳ ಪ್ರಕಾರ ೨೦೧೫ ರೊಳಗೆ ಇನ್ನುಳಿದ ಐಆರ್‏ಎನ್‏ಎಸ್ಎಸ್ ನ ಎಲ್ಲ ಉಪಗ್ರಹಗಳನ್ನು ೧೪೨೦ ಕೋಟಿ ವೆಚ್ಚದ್ದಲ್ಲಿ  ನಿರ್ಮಿಸಿ ಕಕ್ಷೆಗೆ ಕಳುಹಿಸಲಾಗುವುದು ಎಂದಿದ್ದಾರೆ.

ಭಾರತದಲ್ಲೇ ಅಭಿವೃದ್ಧಿಗೊಳಿಸಿರುವ ಈ ಐಆರ್‏ಎನ್‏ಎಸ್ಎಸ್ ಉಪಗ್ರಹಗಳು, ಭಾರತದ ಎಲ್ಲ ಪ್ರದೇಶಗಳ ನಿಖರವಾದ ಮಾಹಿತಿ ಕೊಡಬಲ್ಲ ವಿನ್ಯಾಸ ಹೊಂದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement