ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿತ್ತ ಕಾರ್ಯದರ್ಶಿ ಹುದ್ದೆಯಿಂದ ಅರವಿಂದ್ ಮಾಯಾರಾಂ ಶಿಫ್ಟ್

ಆರ್ಥಿಕ ವ್ಯವಹಾರ ಸಚಿವಾಲಯದಲ್ಲಿ ಹಣಕಾಸು ಕಾರ್ಯದರ್ಶಿಯಾಗಿದ್ದ ಅರವಿಂದ್ ಮಾಯಾರಾಂ ಅವರನ್ನು ....

Rashmi Kasaragodu
Updated On : 16 Oct 2014, 1:21 am

ಅಹ್ಮದಾಬಾದ್: ಆರ್ಥಿಕ ವ್ಯವಹಾರ ಸಚಿವಾಲಯದಲ್ಲಿ ಹಣಕಾಸು ಕಾರ್ಯದರ್ಶಿಯಾಗಿದ್ದ ಅರವಿಂದ್ ಮಾಯಾರಾಂ ಅವರನ್ನು ಕೇಂದ್ರ ಸರ್ಕಾರ  ಪ್ರವಾಸೋದ್ಯಮ ಇಲಾಖೆಗೆ ವರ್ಗಾವಣೆ ಮಾಡಿದೆ. ಹಣಕಾಸು ಕಾರ್ಯದರ್ಶಿಯವರ ಸ್ಥಾನಕ್ಕೆ ರಾಜಸ್ತಾನದ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್‌ರಿಷಿ ಅವರನ್ನು ನಿಯೋಜಿಸಲಾಗುವುದು ಎಂದು ಬಲ್ಲಮೂಲಗಳು ವರದಿ ಮಾಡಿವೆ.

ವಿತ್ತ ಸಚಿವಾಲಯದಲ್ಲಿ ಮೋದಿ ಸರ್ಕಾರದಿಂದ ವರ್ಗಾವಣೆಗೊಳಗಾಗಿರುವ ಹಿರಿಯ ಅಧಿಕಾರಿಯಾಗಳಲ್ಲೊಬ್ಬರಾಗಿದ್ದಾರೆ ಮಾಯಾರಾಂ. ಕಳೆದ ಜೂನ್ ತಿಂಗಳಲ್ಲಿ ಸರ್ಕಾರ ತೆರಿಗೆ ಇಲಾಖೆ ಕಾರ್ಯದರ್ಶಿ ರಾಜೀವ್ ಟಾಕ್ರೂ ಅವರನ್ನು ಎತ್ತಂಗಡಿ ಮಾಡಿತ್ತು.

ಟಾಕ್ರೂ ಮತ್ತು ಮಾಯಾರಾಂ ಅವರನ್ನು ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಒಕ್ಕೂಟ ನೇಮಕ ಮಾಡಿತ್ತು.

ಆದಾಗ್ಯೂ, ಮೆಹ್‌ರಿಷಿ ಮತ್ತು ಮಾಯಾರಾಂ ಇಬ್ಬರೂ ರಾಜಸ್ತಾನ್‌ನಿಂದ 1978ರ ಐಎಎಸ್ ಬ್ಯಾಚ್‌ನಲ್ಲಿ ಜತೆಯಾಗಿಯೇ ಇದ್ದವರಾಗಿದ್ದಾರೆ.

ಅದೇ ವೇಳೆ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅಲೋಕ್ ರಾವತ್ ಅವರನ್ನೂ ಎತ್ತಂಗಡಿ ಮಾಡಲಾಗಿದೆ ಎಂಬ ಸುದ್ದಿ ಕೇಳಿ ಬಿಂದಿದೆ. ಈ ಸ್ಥಾನಕ್ಕೆ ಅನುಜ್ ಕುಮಾರ್ ಬಿಶ್ನೋಯ್ ಅವರು ಬರುವ ಸಾಧ್ಯತೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement