ಪಾಕ್ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ
ಪಾಕಿಸ್ತಾನ ಮತ್ತೆ ಎರಡು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು,...
ಜಮ್ಮು: ಪಾಕಿಸ್ತಾನ ಮತ್ತೆ ಎರಡು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಗಡಿ ನಿಯಂತ್ರಣ ರೇಖೆಯ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಸೇನಾ ಶಿಬಿರಗಳ ಮೇಲೆ ಪಾಕ್ ಸೇನಾ ಪಡೆ ಶುಕ್ರವಾರ ಗುಂಡಿನ ದಾಳೆ ನಡೆಸಿದೆ.
ನಿನ್ನೆ ಮಧ್ಯರಾತ್ರಿ ಹಾಗೂ ಇಂದು ಬೆಳಗ್ಗೆ ಪೂಂಚ್ ಜಿಲ್ಲೆಯ ಹಮಿರ್ಪುರ್ ಸೆಕ್ಟರ್ ಮೇಲೆ ಪಾಕ್ ಸೇನಾ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ. ಆದರೆ ದಾಳಿಯಲ್ಲಿ ಯಾವುದೇ ಜೀವಹಾನಿ ಅಥವಾ ಗಾಯಗಳಾಗಿಲ್ಲ ಎಂದು ಭಾರತೀಯ ಸೇನಾಪಡೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕು ಮುನ್ನ ಅಕ್ಟೋಬರ್ 15ರಂದು ಪೂಂಜ್ ಜಿಲ್ಲೆಯ ಸೌಜಿಯಾನ್-ಕಿರ್ನಿ-ಶಾಹ್ಪುರ್ ಸೆಕ್ಟರ್ನ ಭಾರತೀಯ ಸೇನಾ ಶಿಬಿರಗಳ ಮೇಲೆ ಗುಂಡಿನ ದಾಳಿ ಮಾಡುವ ಮೂಲಕ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿತ್ತು.