ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿಂಡೀಸ್ ನಿರ್ಧಾರದಿಂದ ಬಿಸಿಸಿಐಗೆ ಭಾರೀ ನಷ್ಟ : ಸಂಜಯ್ ಪಟೇಲ್

ಭಾರತ ಪ್ರವಾಸದಲ್ಲಿದ್ದ ವೆಸ್ಟ್ ಇಂಡೀಸ್ ತಂಡ ತನ್ನ ಪ್ರವಾಸವನ್ನು ಅರ್ಧಕ್ಕೆ ನಿಲ್ಲಿಸಿದ ಕಾರಣ ಬಿಸಿಸಿಐ...

Rashmi Kasaragodu
Updated On : 18 Oct 2014, 12:54 pm

ಮುಂಬೈ: ಭಾರತ ಪ್ರವಾಸದಲ್ಲಿದ್ದ ವೆಸ್ಟ್ ಇಂಡೀಸ್ ತಂಡ ತನ್ನ ಪ್ರವಾಸವನ್ನು ಅರ್ಧಕ್ಕೆ ನಿಲ್ಲಿಸಿದ ಕಾರಣ ಬಿಸಿಸಿಐ ಭಾರೀ ನಷ್ಟ ಅನುಭವಿಸಬೇಕಾಗಿ ಬಂದಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಾಟೇಲ್ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮತ್ತು ವೆಸ್ಟ್ ಇಂಡೀಸ್ ಆಟಗಾರರ ಸಂಸ್ಥೆ ನಡುವೆ ನಡೆದ ಸಂಭಾವನೆ ವಿವಾದ ಬಗೆಹರಿಯದ ಹಿನ್ನೆಲೆಯಲಿ ಪ್ರವಾಸಿ ತಂಡದ ಆಟಗಾರರು ಸರಣಿಯನ್ನು ಶುಕ್ರವಾರ ಅರ್ಧಕ್ಕೆ ಮೊಟಕು ಗೊಳಿಸಿದ್ದರು.

ವೆಸ್ಟ್ ಇಂಡೀಸ್ ಆಟಗಾರರ ಈ ನಿರ್ಧಾರದಿಂದಾಗಿ ನಮಗೆ ಭಾರೀ ನಷ್ಟವುಂಟಾಗಿದೆ. ನಮಗಾಗಿರುವ ನಷ್ಟದ ಬಗ್ಗೆ ನಾವು ಐಸಿಸಿ ಗಮನಕ್ಕೆ ತರುತ್ತೇವೆ. ಅದೇ ವೇಳೆ ಶ್ರೀಲಂಕಾ ಜತೆ ಮಾತುಕತೆ ನಡೆಸಲು ನಾವು ಸಮಿತಿಯನ್ನೂ ರಚಿಸಲಿದ್ದೇವೆ ಎಂದು ಬರೋಡಾದಲ್ಲಿ ಮಾತನಾಡಿದ ಸಂಜಯ್ ಪಟೇಲ್ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿವಾದ ಹಿನ್ನೆಲೆಯಲ್ಲಿ  ಕ್ರಿಕೆಟ್ ಮಂಡಳಿ ಅಕ್ಟೋಬರ್ 21ರಂದು ಕಾರ್ಯಕಾರೀ ಸಮಿತಿ ಸಭೆ ಕರೆಯಲಿದ್ದು, ಪ್ರಸ್ತುತ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement