ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

'ಕಪ್ಪು' ಮಾಹಿತಿ ಕೊಡಲಾಗದು

ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣದ ಮಾಹಿತಿ...

Vishwanath S
Updated On : 18 Oct 2014, 9:20 am

ನವದೆಹಲಿ: ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣದ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಹೀಗೆಂದು ಹೇಳಿ ಕೇಂದ್ರ ಸರ್ಕಾರವೇ ಶುಕ್ರವಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.

ಭಾರತವು ಯಾವ ರಾಷ್ಟ್ರಗಳೊಂದಿಗೆ ದ್ವಿತೆರಿಗೆ ತಡೆ ಒಪ್ಪಂದಕ್ಕೆ ಸಹಿ ಹಾಕಿದೆಯೋ, ಅಂತಹ ರಾಷ್ಟ್ರಗಳು ಕಪ್ಪುಹಣದ ಬಗ್ಗೆ ನೀಡಿರುವ ಮಾಹಿತಿಗಳನ್ನು ಬಹಿರಂಗಪಡಿಸುವುದು ಅಸಾಧ್ಯ ಎಂದು ಸರ್ಕಾರ ಹೇಳಿದೆ. ಈ ಮೂಲಕ ಅಧಿಕಾರಕ್ಕೇರಿದ 100 ದಿನಗಳೊಳಗೆ ವಿದೇಶಗಳಲ್ಲಿಟ್ಟಿರುವ ಕಪ್ಪುಹಣವನ್ನು ವಾಪಸ್ ತರುತ್ತೇವೆ ಎಂದು ಘೋಷಿಸಿದ್ದ ಮೋದಿ ಸರ್ಕಾರವೇ ಈಗ ಈ ವಿಚಾರದಲ್ಲಿ ಅಸಹಾಯಕತೆ ಪ್ರದರ್ಶಿಸಿದಂತಾಗಿದೆ.

ಕಪ್ಪಹಣ ಖಾತೆದಾರರ ಹೆಸರು ಬಹಿರಂಗಪಡಿಸಲು ನಮಗೇನೂ ಹಿಂಜರಿಕೆಯಿಲ್ಲ. ನಾವು ಕಾನೂನನ್ನು ಪಾಲಿಸುತ್ತಿದ್ದೇವೆ ಅಷ್ಟೇ. ಯುಪಿಎ ಸರ್ಕಾರದ ಒಪ್ಪಂದದಡಿಯಲ್ಲೇ ಕೆಲಸ ಮಾಡುತ್ತಿದ್ದೇವೆ, ಹೀಗಾಗಿ ಹೆಸರು ಬಹಿರಂಗ ಮಾಡಲು ಆಗುತ್ತಿಲ್ಲ.
- ಅರುಣ್ ಜೇಟ್ಲಿ, ವಿತ್ತ ಸಚಿವ

ಕಾರ್ಪೊರೇಟ್ ಕುಳಗಳನ್ನು ರಕ್ಷಿಸಲು ಮೋದಿ ಸರ್ಕಾರ ಯತ್ನಿಸುತ್ತಿದೆ. ಅಕ್ರಮವಾಗಿ ಗಳಿಸಿದ ಹಣವನ್ನು ವಿದೇಶಿ ಬ್ಯಾಂಕುಗಳಲ್ಲಿಟ್ಟ ದಗಾಕೋರರು ಮಾತ್ರವೇ ಇಂತಹ ಮನವಿ ಸಲ್ಲಿಸಲು ಸಾಧ್ಯವೇ ಹೊರತು ಜನರಿಂದ ಆಯ್ಕೆಯಾದ ಸರ್ಕಾರವಲ್ಲ. ಈ ಬಗ್ಗೆ ಮೋದಿಗೆ ಪತ್ರ ಬರೆದಿದ್ದೇನೆ. ಇದೇ ನನ್ನ ಕಡೆ ಆಸೆ ಎಂದೂ ಹೇಳಿದ್ದೇನೆ.
- ರಾಂ ಜೇಠ್ಮಲಾನಿ, ಹಿರಿಯ ವಕೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement