ಜನಾಂಗೀಯ ಹಲ್ಲೆ ಸಹಿಸುವುದಿಲ್ಲ: ರಿಜ್ಜು
ಗುರ್‌ಗಾಂವ್‌ನಲ್ಲಿ ಇಬ್ಬರು ನಾಗಾಲ್ಯಾಂಡ್‌ನ ವ್ಯಕ್ತಿಗಳ ಮೇಲೆ ನಡೆದ ಹಲ್ಲೆಯ ಬಗ್ಗೆ ಪ್ರತಿಕ್ರಿಯಿಸಿದ ....
ಗುರ್‌ಗಾಂವ್: ಗುರ್‌ಗಾಂವ್‌ನಲ್ಲಿ ಇಬ್ಬರು ನಾಗಾಲ್ಯಾಂಡ್‌ನ ವ್ಯಕ್ತಿಗಳ ಮೇಲೆ ನಡೆದ ಹಲ್ಲೆಯ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜ್ಜು ಜನಾಂಗೀಯ ಹಲ್ಲೆ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಶನಿವಾರ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ರಿಜ್ಜು ಜನಾಂಗೀಯ ಹಲ್ಲೆಯನ್ನು ಖಂಡಿಸಿದ್ದು, ಈಶಾನ್ಯ ರಾಜ್ಯದವರಿಗೆ ಭದ್ರತೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ಇಂಥಾ ಜನಾಂಗೀಯ ದ್ವೇಷಗಳನ್ನು ಸಹಿಸುವುದಿಲ್ಲ. ನಮ್ಮ ಜನರು ಯಾವುದಕ್ಕೂ ಸಂಯಮ ಕಳೆದುಕೊಳ್ಳಬಾರದು. ನಾವು ಭಾವೈಕ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ರಿಜ್ಜು ಅವರು ಹೇಳಿದ್ದಾರೆ.
ಈಶಾನ್ಯ ರಾಜ್ಯದ ವಿದ್ಯಾರ್ಥಿಗಳ ಭದ್ರತೆಗಾಗಿ ಸರ್ಕಾರ ಸಹಾಯವಾಣಿ ಹಾಗೂ ಇಂಥಾ ಸಮಸ್ಯೆಗಳನ್ನು ಪರಿಹರಿಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ತಾನು ಪ್ರಧಾನಿ ನರೇಂದ್ರ ಮೋದಿ ಮತ್ತು ದೇಶೀಯ ಭದ್ರತಾ ಸಲಹೆಗಾರರ ಜತೆ ಮಾತುಕತೆ ನಡೆಸಿದ್ದು, ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.