ಮಹಾರಾಷ್ಟ್ರ, ಹರ್ಯಾಣ ಚುನಾವಣಾ ಫಲಿತಾಂಶ: ಕ್ಷಣ ಕ್ಷಣದ ಸುದ್ದಿ
ಮಹಾರಾಷ್ಟ್ರ, ಹರ್ಯಾಣ ಚುನಾವಣಾ ಫಲಿತಾಂಶ: ಕ್ಷಣ ಕ್ಷಣದ ಸುದ್ದಿ
ಮಹಾರಾಷ್ಟ್ರ ಮತ್ತು ಹರ್ಯಾಣದ ವಿಧಾನಸಭಾ ಚುನಾವಣೆ ಫಲಿತಾಂಶದ ಕ್ಷಣ ಕ್ಷಣ ಸುದ್ದಿಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಭಾನುವಾರ ಬೆಳಗ್ಗೆ 8.00 ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು ಎಲ್ಲಿ ಯಾವ ಯಾವ ಪಕ್ಷಗಳು ಮುನ್ನಡೆ ಸಾಧಿಸಿವೆ? ಎಲ್ಲೆಲ್ಲಿ ಯಾವ ಪಕ್ಷದ ಪ್ರಧಾನ ಅಭ್ಯರ್ಥಿಗಳು ಮನ್ನಡೆ ಸಾಧಿಸುತ್ತಿದ್ದಾರೆ? ಉಭಯ ರಾಜ್ಯಗಳಲ್ಲಿ ಬಿಜೆಪಿ ಗಳಿಸಿದ ಸ್ಥಾನಗಳೆಷ್ಟು? ಹಿನ್ನಡೆ ಅನುಭವಿಸುತ್ತಿರುವ ಪಕ್ಷ ಯಾವುದು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ಕ್ಷಣ ಕ್ಷಣದ ಅಪ್ಡೇಟ್ಗಳು ಇಲ್ಲಿವೆ...
ಎಲ್ಲೆಲ್ಲಿ ಏನೇನಾಯ್ತು? ಕ್ಷಣ ಕ್ಷಣದ ಸುದ್ದಿ...
7.15: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಬಿಜೆಪಿ ಮತ್ತು ಶಿವಸೇನೆ ಮುಖಂಡರ ಸತತ ಸರ್ಕಸ್, ಸಂಧಾನದ ಹೊಣೆ ಹೊತ್ತ ಕೇಂದ್ರ ಸಚಿವ ನಿತಿನ್ ಗಡ್ಕರಿ
7.00: ಬಿಜೆಪಿ ನಾಯಕರಿಗೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕರೆ. ಫಲಿತಾಂಶದ ಕುರಿತಂತೆ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದ ಉದ್ಧವ್. ಮರು ಮೈತ್ರಿಗೆ ಪರೋಕ್ಷ ಚಾಲನೆ
6.45: ಬಿಜೆಪಿ ಬಯಸಿದರೆ ಮಾತ್ರ ಮರು ಮೈತ್ರಿ ಚಿಂತನೆ, ಬಿಜೆಪಿ ಬೇಕಾದರೆ ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಳ್ಳಲಿ: ಸುದ್ದಿಗೋಷ್ಠಿಯಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿಕೆ. ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
6.30: 2 ರಾಜ್ಯಗಳಲ್ಲಿ ಬಿಜೆಪಿಗೆ ಐತಿಹಾಸಿಕ ಜಯ, ಗೆಲುವಿಗಾಗಿ ಶ್ರಮಿಸಿದ ಕೋಟ್ಯಂತರ ಕಾರ್ಯಕರ್ತರಿಗೆ ಅಭಿನಂದನೆ. ಮತದಾರರ ನಂಬಿಕೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸುತ್ತೇವೆ.
-ಪ್ರಧಾನಿ ನರೇಂದ್ರ ಮೋದಿ (ಟ್ವಿಟರ್ನಲ್ಲಿ) ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
5.40: ಹರ್ಯಾಣ ವಿಧಾನಸಭೆ ಚುನವಣಾ ಸೋಲು ಹಿನ್ನಲೆ: ಹರ್ಯಾಣ ಸಿಎಂ ಭೂಪಿಂದರ್ ಸಿಂಗ್ ಹೂಡಾ ರಾಜಿನಾಮೆ
5.20: ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನವಣಾ ಸೋಲು ಹಿನ್ನಲೆ: ಮತದಾರರ ತೀರ್ಪಿಗೆ ತಲೆ ಬಾಗುತ್ತೇವೆ. ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸಲು ಶ್ರಮಿಸುತ್ತೇವೆ.
-ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
5.00: ಎರಡು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿನ್ನಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸುದ್ದಿಗೋಷ್ಠಿ. ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
4.30: ಶಿವಸೇನೆಯೊಂದಿಗೆ ಮೈತ್ರಿ ಸಾಧ್ಯತೆ ಸುಳಿವು ಬಿಟ್ಟುಕೊಟ್ಟ ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ದೇವೇಂದ್ರ ಫಡ್ನಾವಿಸ್
4.20: ಮಹಾರಾಷ್ಟ್ರದಲ್ಲಿ ಮೋದಿ ಅಲೆ ಕೆಲಸ ಮಾಡಿಲ್ಲ. ಇದಕ್ಕೆ ಪ್ರಸಕ್ತ ಫಲಿತಾಂಶವೇ ಸಾಕ್ಷಿ. ಯಾರು ಅಭಿವೃದ್ದಿಗಾಗಿ ಕೆಲಸ ಮಾಡುತ್ತಾರೆಯೋ ಅವರಿಗೆ ನಮ್ಮ ಬೆಂಬಲ
-ಉದ್ಧವ್ ಠಾಕ್ರೆ
4.10: ಸಂಜೆ 6 ಗಂಟೆ ಸಂಸದೀಯ ಸಭೆ ನಡೆಯಲಿದ್ದು, ಸಭೆಯಲ್ಲಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲಾಗುತ್ತದೆ.
-ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿಕೆ
4.00: ಮಹಾರಾಷ್ಟ್ರ ಮಾಜಿ ಸಿಎಂ ನಾರಾಯಣ ರಾಣೆಗೆ ಹೀನಾಯ ಸೋಲು
3.50: ಮಹಾರಾಷ್ಟ್ರ ಮಾಜಿ ಸಿಎಂ ಮತ್ತು ಕಾಂಗ್ರೆಸ್ ಪಕ್ಷದ ಕರಾಡ್ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಪೃಥ್ವಿರಾಜ್ ಚೌಹ್ವಾಣ್ ಗೆಲುವು.
3.40: ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎನ್ಸಿಪಿ ಮುಖಂಡ ಅಜಿತ್ ಪವಾರ್ ಭರ್ಜರಿ ಗೆಲುವು.
3.30: ಬಿಜೆಪಿ ಸಾಧನೆ ಅಚ್ಚರಿ ತಂದಿಲ್ಲ. ಶಿವಸೇನೆ ಮೈತ್ರಿ ಮಾತುಕತೆ ಇಟ್ಟರೆ ತಿರಸ್ಕರಿಸಬೇಡಿ. ಆರ್ ಎಸ್ಎಸ್ ಮುಖಂಡ ಎನ್ ಜಿ ವೈದ್ಯ ಸಲಹೆ.
3.20: ಬೋರಿವಿಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿನೋದ್ ತಾವ್ಡೆ ಭರ್ಜರಿ ಗೆಲುವು. ವಿನೋದ್ ತಾವ್ಡೆ ಮುಖ್ಯಮಂತ್ರಿ ಅಭ್ಯರ್ಥಿ ರೇಸ್ನಲ್ಲಿರುವ ಪ್ರಮುಖ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ.
3.10: ನಿರೀಕ್ಷೆಯಂತೆಯೇ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. ಹರ್ಯಾಣದಲ್ಲಿ ನಮ್ಮ ಬಿಜೆಪಿ ಅಧಿಕಾರ ರಚಿಸಲಿದೆ. ಮಹಾರಾಷ್ಟ್ರದಲ್ಲಿ ಮೈತ್ರಿ ಅನಿವಾರ್ಯವಾಗಿದೆ. ನಾನು ಪ್ರವಾಸ ಮಾಡಿದ್ದಾಗ ಬಿಜೆಪಿ ಪರ ಅಲೆ ಇತ್ತು. ಮೋದಿ ಆಡಳಿತ ಮತ್ತು ಕಾಂಗ್ರೆಸ್ ಮುಕ್ತ ಭಾರತ ಆಶಯಕ್ಕೆ ಜನತೆ ಮನ್ನಣೆ ನೀಡಿದ್ದಾರೆ.
-ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
3.00: ಎನ್ಸಿಪಿ ಅಭ್ಯರ್ಥಿ ನಿತೇಶ್ ರಾಣೆಗೆ ಭರ್ಜರಿ ಜಯ. ಕನ್ಕಾವ್ಲಿ ಕ್ಷೇತ್ರದ ಅಭ್ಯರ್ಥಿಯಾಗಿದ್ದ ನಿತೇಶ್ ರಾಣೆಗೆ ಗೆಲುವು.
2.50: ಮಹಾರಾಷ್ಟ್ರ ಮಾಜಿ ಸಚಿವ ಛಗನ್ ಭುಜಬಲ್ಗೆ ಭರ್ಜರಿ ಜಯ. ಯೆಯೋಲಾ ಕ್ಷೇತ್ರದ ಎನ್ಸಿಪಿ ಅಭ್ಯರ್ಥಿಯಾಗಿದ್ದ ಛಗನ್ ಜಯ ದಾಖಲಿಸಿದ್ದಾರೆ.
2.40: ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಮಹಾರಾಷ್ಟ್ರದಲ್ಲಿ ಗೆಲುವು ನಿರೀಕ್ಷೆಗಿಂತ ಕೊಂಚ ಕಡಿಮೆಯಾಗಿದೆ. ನರೇಂದ್ರ ಮೋದಿ ಅವರ ಜನಪರ ಆಡಳಿತ ಚುನಾವಣೆಯಲ್ಲಿ ಕೆಲಸ ಮಾಡಿದ್ದು, ಬಿಜೆಪಿ ಸರ್ಕಾರದ ಮೇಲೆ ನಂಬಿಕೆ ಇಟ್ಟು ಮತದಾರರು ಮತ ನೀಡಿದ್ದಾರೆ.
-ಡಿವಿ ಸದಾನಂದಗೌಡ
2.30: ನಾವು ಹೆಚ್ಚಿನ ಸೀಟುಗಳಲ್ಲಿ ಗೆಲವು ನಿರೀಕ್ಷಿಸಿದ್ದೆವು. ಇದೀಗ ಜನರ ತೀರ್ಪನ್ನು ಗೌರವಿಸುತ್ತೇವೆ. ನೂತನ ಸರ್ಕಾರಕ್ಕೆ ಅಭಿನಂದನೆಗಳು- ಅಭಯ್ ಚೌಟಾಲ (ಐಎನ್ಎಲ್ಡಿ)
2.20: ಮಹಾರಾಷ್ಟ್ರದಲ್ಲಿ ಖಾತೆ ತೆರೆದ ಮಜ್ಲೀಸ್ ಇ ಇತ್ತೇಹಾದುಲ್ ಮುಸ್ಲೀಮೀನ್ (ಎಂಐಎಂ). ಬೈಕುಲ್ಲಾ ಕ್ಷೇತ್ರದಲ್ಲಿ ವಾರಿಸ್ ಯೂಸಫ್ ಗೆಲವು
2.00: ಏನೇ ಆಗಲಿ ಮುಂದಿನ ಮುಖ್ಯಮಂತ್ರಿ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಆಗುತ್ತಾರೆ-ಶಿವಸೇನಾ ವಕ್ತಾರ ಸಂಜಯ್ ರೌತ್
1.45: ಬಿಜೆಪಿ-120, ಶಿವಸೇನೆ 60, ಕಾಂಗ್ರೆಸ್ 45, ಎನ್ಸಿಪಿ 42 , ಎಂಎನ್ಎಸ್ 3 , ಇತರೆ -18
1.15: ಮುಂದಿನ ಸಿಎಂ ಬಗ್ಗೆ ಬಿಜೆಪಿ ನಿರ್ಧರಿಸಲಿದೆ-ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ದೇವೇಂದ್ರ ಫಡ್ನವಿಸ್
1.05: ಮೋದಿ ಅಲೆ ಕಾರ್ಯಗತವಾಗಿಲ್ಲ, ಅವರು ಹೆಚ್ಚು ಕೆಲಸ ಮಾಡಿದ್ದರೆ ಬಿಜೆಪಿಗೆ ಇನ್ನಷ್ಟು ಸೀಟು ಸಿಗುತ್ತಿತ್ತು- ಉದ್ದವ್ ಠಾಕ್ರೆ
12.45: ಜನರ ತೀರ್ಪನ್ನು ಗೌರವಿಸುತ್ತೇನೆ. ನನಗೆ ನೀಡಿದ ಸಹಕಾರಕ್ಕೆ ಧನ್ಯವಾದಗಳು ಮತ್ತು ಹೊಸ ಸರ್ಕಾರಕ್ಕೆ ಅಭಿನಂದನೆಗಳು
12.25: ಹಿಸಾರ್ ನಿಂದ ಸಾವಿತ್ರಿ ಜಿಂದಾಲ್ಗೆ ಸೋಲು
12.20 : ದಕ್ಷಿಣ ಕರಾಡ್ ನಿಂದ ಪೃಥ್ವೀರಾಜ್ ಚೌಹಾಣ್, ಯೆವ್ಲಾದಿಂದ ಗಗನ್ ಭುಜ್ಬಲ್ ಮತ್ತು ಬಾರಾಮತಿಯಿಂದ ಅಜಿತ್ ಪವಾರ್ ಜಯಭೇರಿ.
12.05 : ಉದ್ದವ್ ಠಾಕ್ರೆ ಅವರನ್ನು ಭೇಟಿ ಮಾಡುವ ಸಲುವಾಗಿ ಶಿವಸೇನೆಯ ಹಿರಿಯ ನಾಯಕ ಮನೋಹರ್ ಜೋಷಿ ಮಾತೊಶ್ರೀಗೆ ತಲುಪಿದ್ದಾರೆ
12.01 : ನಮ್ಮಿಂದ ತಪ್ಪಾಗಿದೆ, ಆದರಿಂದಲೇ ನಮ್ಮ ಜನಪ್ರಿಯತೆ ಕಡಿಮೆಯಾಗಿದೆ. ಎಲ್ಲಿ ತಪ್ಪಾಗಿದೆ ಎನ್ನುವುದರ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಲಿದ್ದೇವೆ- ಕಾಂಗ್ರೆಸ್ ನೇತಾರ ಸತ್ಯವ್ರತ್ ಚತುರ್ವೇದಿ
12.15: ಮಹಾರಾಷ್ಟ್ರದಲ್ಲಿ ಎನ್ಸಿಪಿ ಅಭ್ಯರ್ಥಿ ಅಜಿತ್ ಪವಾರ್ ಗೆಲುವು
11.55: ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ಗೆ ಭರ್ಜರಿ ಜಯ
11.46: ಮಹಾರಾಷ್ಟ್ರದಲ್ಲಿ ಬಿಜೆಪಿ -121, ಶಿವಸೇನಾ- 62, ಕಾಂಗ್ರೆಸ್ -45, ಎನ್ಸಿಪಿ -39, ಎಂಎನ್ಎಸ್ -3, ಇತರೆ -18 ಸೀಟುಗಳಲ್ಲಿ ಮುನ್ನಡೆ
11.45: ಮುಂಬೈನಲ್ಲಿ ಬಿಜೆಪಿ ನೇತಾರ ಕಿರಿತ್ ಸೋಮೈಯಾ ಅವರಿಂದ ಸುದ್ದಿಗೋಷ್ಠಿ. ಬಿಜೆಪಿ ಇಲ್ಲಿ ಸೆಂಚುರಿ ಹೊಡೆದಿದೆ. ಮಹಾರಾಷ್ಟ್ರದಲ್ಲಿ ನಾವು ಮಿನಿ ಮೋದಿ
ಸರ್ಕಾರವನ್ನು ರಚಿಸಲಿದ್ದೇವೆ- ಕಿರಿತ್ ಸೋಮೈಯಾ
11.35: ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ದೇವೇಂದ್ರ ಫಡ್ನವಿಸ್ ನಾಗ್ಪುರ್ ಸೌತ್ವೆಸ್ಟ್ ಕ್ಷೇತ್ರದಿಂದ ಗೆಲವು. 48 ಸಾವಿರ ಮತಗಳ ಅಂತರದಿಂದ ಗೆಲವು
11.20: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಮೈತ್ರಿ ಹೊಂದಲು ಎನ್ಸಿಪಿ ಉತ್ಸುಕ. ಶರದ್ ಪವಾರ್ ನೇತೃತ್ವದ ಪಕ್ಷದೊಂದಿಗೆ ಕೈ ಜೋಡಿಸಲ್ಲ- ಬಿಜೆಪಿ ನೇತಾರ ಪ್ರಕಾಶ್ ಜವಡೇಕರ್
11.10: ಕಾಂಗ್ರೆಸ್ ಹಿರಿಯ ನಾಯಕ ನಾರಾಯಣ್ ರಾಣೆ ಕುಡಾಲ್ ಕ್ಷೇತ್ರದಿಂದ ಪರಾಭವ. ಪೃಥ್ವೀರಾಜ್ ಚೌಹಾಣ್ (ಕರಾಡ್ ಸೌತ್), ಅಮಿತ್ ದೇಶ್ಮುಖ್ (ಲಾತುರ್ ಸಿಟಿ ) ಯಲ್ಲಿ ಮುನ್ನಡೆ. ಭೋಕರ್ ಕ್ಷೇತ್ರದಲ್ಲಿ ಅಶೋಕ್ ಚೌಹಾಣ್ ಪತ್ನಿ ಅಮೀತ್ ಚೌಹಾಣ್ ಮುನ್ನಡೆ
11.00: ಹರ್ಯಾಣ ಸಿಎಂ ಭೂಪಿಂದರ್ ಸಿಂಗ್ ಹೂಡಾಗೆ ಜಯ
10.34: ಮೊದಲ ಫಲಿತಾಂಶ: ಹರ್ಯಾಣದ ಅಂಬಾಲಾದಲ್ಲಿ ಬಿಜೆಪಿಯ ಅನಿಲ್ ವಿಜ್ ಮತ್ತು ಪುಣೆಯ ಪರ್ವಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಮಾಧುರಿ ಮಿಸಾಲ್ ಗೆಲುವು.
10.30: ಮಹಾರಾಷ್ಟ್ರದಲ್ಲಿ ಬಿಜೆಪಿ ರಾಜ್ಯ ಮುಖಂಡರು ಮುಂದಿನ ನಡೆಯ ಬಗ್ಗೆ ಚರ್ಚೆ ಆರಂಭಿಸಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ ಬಹುಮತ ಸಾಧಿಸುವ ಎಲ್ಲ ಸಾಧ್ಯತೆಗಳು ಸ್ಪಷ್ಟವಾಗಿದೆ.
10.20: ತನ್ನ ಮಿತ್ರ ಪಕ್ಷಗಳೊಂದಿಗೆ ಮಹಾರಾಷ್ಟ್ರದಲ್ಲಿ ಬಿಜೆಪಿ 115 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಶಿವಸೇನೆ 61 ಸೀಟು, ಕಾಂಗ್ರೆಸ್ 46 ಮತ್ತು ಎನ್ಸಿಪಿ 45 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜ್ ಠಾಕ್ರೆ ಅವರ ಎಂಎನ್ಎಸ್ 3 ಸೀಟುಗಳಲ್ಲಿ ಮುನ್ನಡೆ ಸಾಧಿಸಿದ್ದು, ಇತರೆ ಪಕ್ಷಗಳು 18 ಸೀಟುಗಳಲ್ಲಿ ಮುನ್ನಡೆ ಸಾಧಿಸಿಕೊಂಡಿವೆ.
9.50: ಅತೀ ಹೆಚ್ಚು ಸೀಟುಗಳಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ಮಹಾರಾಷ್ಟ್ರದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ -121 , ಶಿವಸೇನೆ -62, ಕಾಂಗ್ರೆಸ್- 45, ಎನ್ಸಿಪಿ- 39, ಎಂಎನ್ಎಸ್- 3, ಇತರೆ 18
9.47: ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳವುದರ ಬಗ್ಗೆ ಉದ್ದವ್ ಠಾಕ್ರೆ ತೀರ್ಮಾನ ಕೈಗೊಳ್ಳಲಿದ್ದಾರೆ-ಸಂಜಯ್ ರೌತ್ (ಶಿವಸೇನೆ)
9.40: ಬಿಜೆಪಿ ಮುನ್ನಡೆ ಸಾಧಿಸುತ್ತಿರುವುದನ್ನು ನೋಡಿದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಸಿದ್ಧವಾಗಿದೆ. ಬಿಜೆಪಿ ಪ್ರಾಥಮಿಕ ಮಂಡಳಿ ಮುಂದಿನ ಸಿಎಂ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ- ದೇವೇಂದ್ರ ಫಡ್ನಾವಿಸ್
9.25: ದೇಶ ಗೆದ್ದಿದೆ. ನರೇಂದ್ರ ಮೋದಿ ಅವರ ಯೋಜನೆಗಳಿಗೆ ಸಿಕ್ಕ ಗೆಲುವು ಇದು -ಬಿಜೆಪಿಯ ಶಹನವಾಜ್ ಹುಸೈನ್ ಹೇಳಿಕೆ
9.15: ಬಿಜೆಪಿ ಅಭ್ಯರ್ಥಿಗಳಾದ ರಾಮ್ ಕದಂ (ಘಟ್ಕೋಪರ್ ಪಶ್ಚಿಮ), ಪ್ರಕಾಶ್ ಮೆಹ್ತಾ (ಘಟ್ಕೋಪರ್ ಪೂರ್ವ), ಪಂಕಜ್ ಮುಂಡೇ (ಪಾರ್ಲಿ), ಸುನಿಲ್ ದೇಶ್ಮುಖ್ (ಅಮರಾವತಿ ), ದೇವೇಂದ್ರ ಫಡ್ನಾವಿಸ್ (ನಾಗ್ಪುರ್ ಸೌತ್ ವೆಸ್ಟ್), ವಿಂದೋ ತಾವ್ಡೆ (ಬೋರಿವಲಿ)
9.10: ಮಹಾರಾಷ್ಟ್ರದಲ್ಲಿ ಬಿಜೆಪಿ -135, ಶಿವಸೇನೆ -65 ಕಾಂಗ್ರೆಸ್ 42, ಎನ್ ಸಿಪಿ- 40 , ಎಂಎನ್ಎಸ್ -3 ಇತರೆ -2 ಮುನ್ನಡೆ
9.05: ಹರ್ಯಾಣದಲ್ಲಿ ಬಿಜೆಪಿ -51, ಐಎನ್ಎಲ್ಡಿ -20, ಕಾಂಗ್ರೆಸ್ -15, ಹೆಚ್ ಜೆಸಿಬಿಎಲ್-4, ಇತರೆ -0
8.50: ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ ಕರಾಡ್ (ದಕ್ಷಿಣ)ಮತ್ತು ನಾರಾಯಣ್ ಅವರು ಯೆವ್ಲಾ ಕ್ಷೇತ್ರದಲ್ಲಿ
8.45: ಭಾರತದ ಜನತೆ ಬದಲಾಗಿದೆ, ಉತ್ತಮ ಸರ್ಕಾರಕ್ಕಾಗಿ ಜನರು ಮೋದಿಗೆ ಮತ ನೀಡಿದ್ದಾರೆ - ಪ್ರಕಾಶ್ ಜವಡೇಕರ್ ಹೇಳಿಕೆ
8.41: ಹರ್ಯಾಣದಲ್ಲಿ ಬಿಜೆಪಿ -46, ಐಎನ್ಎಲ್ಡಿ - 17, ಕಾಂಗ್ರೆಸ್- 11, ಹೆಚ್ಜೆಸಿಬಿಎಲ್ -2, ಇತರೆ -1 ಸ್ಥಾನದಲ್ಲಿ ಮುನ್ನಡೆ. ಕಾಂಗ್ರೆಸ್ನ ರಣ್ದೀಪ್ ಸಿಂಗ್ ಸುರೇಜ್ವಾಲಾ ಕೈತಾಲ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
8.40: ಮಹಾರಾಷ್ಟ್ರದಲ್ಲಿ ಬಿಜೆಪಿ -75, ಶಿವಸೇನೆ -33, ಕಾಂಗ್ರೆಸ್ -23, ಎನ್ಸಿಪಿ -19, ಎಂಎನ್ಎಸ್-0, ಇತರೆ ಪಕ್ಷ-1 ಸ್ಥಾನದಲ್ಲಿ ಮುನ್ನಡೆ
8.20: ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಮುನ್ನಡೆ
8.11: ಹರ್ಯಾಣದಲ್ಲಿ ಬಿಜೆಪಿ -2 ಮತ್ತು ಐಎನ್ಎಲ್ಡಿ -1 ಸ್ಥಾನದಲ್ಲಿ ಮುನ್ನಡೆ
8.10 ಮಹಾರಾಷ್ಟ್ರದಲ್ಲಿ ಬಿಜೆಪಿ -3, ಶಿವಸೇನೆ -1, ಕಾಂಗ್ರೆಸ್ -1, ಎನ್ಸಿಪಿ - 1 ಸ್ಥಾನಗಳಲ್ಲಿ ಮುನ್ನಡೆ
8.05: ಮಹಾರಾಷ್ಟ್ರದ 269 ಕೇಂದ್ರ ಮತ್ತು ಹರ್ಯಾಣದ 57 ಕೇಂದ್ರಗಳಲ್ಲಿ ಮತ ಎಣಿಕೆ
ಬೆಳಗ್ಗೆ 8.00: ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಮತ ಎಣಿಕೆ ಆರಂಭ