ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದೌಲಾ ಕೌನ್ ಗ್ಯಾಂಗ್ ರೇಪ್: ಐವರಿಗೆ ಜೀವಾವಧಿ ಶಿಕ್ಷೆ

೨೦೧೦ ರಲ್ಲಿ ಕಾಲ್ ಸೆಂಟರ್ ಯುವತಿಯೊಬ್ಬಳನ್ನು ದೆಹಲಿಯಲ್ಲಿ ಗ್ಯಾಂಗ್ ರೇಪ್ ಮಾಡಿದ್ದ ಐವರಿಗೆ ಜೀವಾವಧಿ ಶಿಕ್ಷೆಯಾಗಿದೆ.

Updated On : 20 Oct 2014, 3:45 am

ನವದೆಹಲಿ: ೨೦೧೦ ರಲ್ಲಿ ಕಾಲ್ ಸೆಂಟರ್ ಯುವತಿಯೊಬ್ಬಳನ್ನು ದೆಹಲಿಯಲ್ಲಿ ಗ್ಯಾಂಗ್ ರೇಪ್ ಮಾಡಿದ್ದ ಐವರಿಗೆ ಜೀವಾವಧಿ ಶಿಕ್ಷೆಯಾಗಿದೆ. ಈ ಘಟನೆ ರಾಜಧಾನಿಯ ಸುತ್ತ ಮುತ್ತ ಇರುವ ಬಿಪಿಒಗಳಲ್ಲಿ ತಡ ರಾತ್ರಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಯ ನಿರ್ಲಕ್ಷತೆಯನ್ನು ತೋರಿಸಿತ್ತು.

ನ್ಯಾಯಾಲಯ ಕಳೆದ ವಾರ ಇವರನ್ನು ಅಪರಾಧಿಗಳು ಎಂದು ತೀರ್ಪು ನೀಡಿತ್ತು.

ಇವರು ಹಲ್ಲೆ ಮಾಡಿದ ಯುವತಿಗೆ ೩೦ ವರ್ಷವಾಗಿತ್ತು. ದೌಲಾ ಖಾನ್ ನಲ್ಲಿ ಆ ಯುವತಿ ತನ್ನ ಪಾಳಯದ ನಂತರ ಸಹೋದ್ಯೋಗಿಯೊಂದಿಗೆ ಮನೆಗೆ ನಡೆದು ಹೋಗುತ್ತಿರುವಾಗ ದುಷ್ಕರ್ಮಿಗಳು ಆ ಯುವತಿಯನ್ನು ಬಲವಂತವಾಗಿ ಎತ್ತಿಕೊಂಡು ಹೋಗಿ, ೩೦ ನಿಮಿಷದವರೆಗೂ ಒಬ್ಬೊಬ್ಬರಂತೆ ಚಲಿಸುತಿದ್ದ ವಾಹನದಲ್ಲಿ ರೇಪ್ ಮಾಡಿ ಹಲ್ಲೆಗೊಳಿಸಿದ್ದರು.

ಈ ಕೇಸ್ ನ ತರುವಾಯ, ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಹೆಂಗಸರಿಗೆ ಸುರಕ್ಷತೆಯನ್ನು ಕೊಡುವಂತೆ ಬಿಪಿಒ ಗಳಿಗೆ ಸೂಚನೆ ಕೊಡಲಾಗಿತ್ತು. ಅಲ್ಲದೆ ಅವರನ್ನು ಮನೆಗೆ ವಾಪಸ್ ಬಿಡುವ ವಾಹನಗಳಲ್ಲಿ ಸಶಸ್ತ್ರ ಅಂಗರಕ್ಷಕನೊಬ್ಬನನ್ನು ಕಳುಹಿಸಲೆಬೇಕೆಂದು ಕಡ್ಡಾಯ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement