ಸಂಪೂರ್ಣ ಜನಾದೇಶವಿಲ್ಲ, ಆದರೂ ಕೆಲವರು ಗೆಲುವಿನ ನಗಾರಿ ಹೊಡೆಯುತ್ತಿದ್ದಾರೆ: ಶಿವಸೇನೆ
ಚುನಾವಣಾ ಪ್ರಚಾರದ ವೇಳೆ ಕಂಡ ಅಲೆ, ತೀರಕ್ಕೆ ಬರುವಷ್ಟರಲ್ಲಿ ತನ್ನ ಬಲವನ್ನು ಕಳೆದುಕೊಂಡಿದೆ, ಎಂದು ನರೇಂದ್ರ..
ಮುಂಬೈ: ಚುನಾವಣಾ ಪ್ರಚಾರದ ವೇಳೆ ಕಂಡ ಅಲೆ, ತೀರಕ್ಕೆ ಬರುವಷ್ಟರಲ್ಲಿ ತನ್ನ ಬಲವನ್ನು ಕಳೆದುಕೊಂಡಿದೆ, ಎಂದು ನರೇಂದ್ರ ಮೋದಿಯವರ ವಿರುದ್ಧ ಹರಿ ಹಾಯ್ದಿರುವ ಶಿವಸೇನೆ, ಬಿಜೆಪಿ ಮಹಾರಾಷ್ಟ್ರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರವೂ, ಯಾರಿಗೂ ಬಹುಮತ ಸಿಕ್ಕದ ಸಂದರ್ಭದಲ್ಲಿ ರಾಜ್ಯದ ಉಳಿವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದೆ.
ಯಾವುದೇ ಹೊಂದಾಣಿಕೆಯಿಲ್ಲದೆ ಬಹುಕೋಣದ ಸ್ಪರ್ಧೆಯಿಂದಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಎನ್ ಸಿ ಪಿ ಗೆ ಅನುಕೂಲವಾಗಿದೆ, ಇಂತಹ ಛಿದ್ರಗೊಂಡ ತೀರ್ಪಿನಿಂದ ನಿಮಗೆ ಸಂತಸವೇ ಎಂದು ಶಿವಸೇನೆ ಮತದಾರರನ್ನು ಪ್ರಶ್ನಿಸಿದೆ.
ಬಿಜೆಪಿ ಮತ್ತು ಶಿವಸೇನೆಯ ಮೈತ್ರಿ ಮುರಿದಿದ್ದರಿಂದ ಎಲ್ಲ ಕಡೆಗಳಲ್ಲೂ ಬಹುಕೋಣ ಸ್ಪರ್ಥೆ ಏರ್ಪಟ್ಟು, ಮತಗಳ ಹಂಚಿಕೆಯಾಯಿತು. ಇದು ಬಿಜೆಪಿಗೂ ಮತ್ತು ಕಾಂಗ್ರೆಸ್-ಎನ್ ಸಿ ಪಿ ಗೂ ಅನುಕೂಲಸಿಂಧುವಾಯಿತು. ಲೋಕಸಭಾ ಚುನಾವಣೆಯನ್ನು ಗಮನಿಸಿದಾಗ ಇವೆರಡೂ ಪಕ್ಷಗಳು ಒಟ್ಟಿಗೆ ೨೫ ಸ್ಥಾನಗಳನ್ನು ಗೆಲ್ಲಲು ಸಾಧ್ಯವಿರಲಿಲ್ಲ ಎಂದು ಶಿವಸೇನೆ ತಮ್ಮ ಮುಖವಾಣಿ ಸಾಮ್ನಾದ ಇಂದಿನ ಸಂಚಿಕೆಯ ಸಂಪಾದಕೀಯದಲ್ಲಿ ಬರೆದುಕೊಂಡಿದೆ.
ಯಾವುದೇ ಪಕ್ಷ ಬಹುಮತವನ್ನು ಗಳಿಸದೆ, ಅಸ್ಥಿರತೆಯಲ್ಲಿ ರಾಜ್ಯ ಹೇಗೆ ಉಳಿಯುತ್ತದೆ ಎಂಬ ಸಂದೇಹವನ್ನು ಸಂಪಾದಕೀಯದಲ್ಲಿ ವ್ಯಕ್ತಡಿಸಿದೆ.
ಯಾವುದೇ ಪಕ್ಷಕ್ಕೂ ಜನಾದೇಶ ದೊರೆತಿಲ್ಲ, ಹೀಗಾಗ್ಯೂ ಕೆಲವರು ಜಯದ ನಗಾರಿ ಬಾರಿಸುತ್ತಿದ್ದಾರೆ. ನಾವು ಅವರನ್ನು ಅಭಿನಂದಿಸುತ್ತೇವೆ. ನಾವು ಮಹಾರಾಷ್ಟ್ರಕ್ಕೆ ಸೇವೆ ಸಲ್ಲಿಸುವದನ್ನು ಮುಂದುವರೆಸುತ್ತೇವೆ, ಏಕೆಂದರೆ ಶಿವಸೇನೆ ಹುಟ್ಟಿದ್ದೇ ಅದಕ್ಕೆ ಎಂದಿದೆ ಸಾಮ್ನಾ ಪತ್ರಿಕೆಯ ಸಂಪಾದಕೀಯ.