ಅಟ್ಟಪಾಡಿಯಲ್ಲಿ ಮತ್ತೆ ಇಬ್ಬರು ಆದಿವಾಸಿ ಶಿಶುಗಳ ಸಾವು, ಸಾವಿನ ಸಂಖ್ಯೆ ೧೦ಕ್ಕೆ ಏರಿಕೆ
ಆದಿವಾಸಿ ಮಕ್ಕಳ ಅನಾರಾಗ್ಯ ಮತ್ತು ಅಪೌಷ್ಟಿಕತೆಯ ಕಳವಳ ಹೆಚ್ಚುತ್ತಿರುವಂತೆಯೇ, ಅಟ್ಟಪಾಡಿಯಲ್ಲಿ ಈಗ ಮತ್ತೆ...
ಪಾಲಕ್ಕಾಡ್: ಆದಿವಾಸಿ ಮಕ್ಕಳ ಅನಾರಾಗ್ಯ ಮತ್ತು ಅಪೌಷ್ಟಿಕತೆಯ ಕಳವಳ ಹೆಚ್ಚುತ್ತಿರುವಂತೆಯೇ, ಅಟ್ಟಪಾಡಿಯಲ್ಲಿ ಈಗ ಮತ್ತೆ ಇಬ್ಬರು ಆದಿವಾಸಿ ಹಸಿಗೂಸುಗಳು ಸಾವಿಗೀಡಾಗಿರುವುದು ಬೆಳಕಿಗೆ ಬಂದಿರುವುದನ್ನ ಇಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯಿಂದ ಅಟ್ಟಪಾಡಿಯಲ್ಲಿ ಸಾವಿನ ಸಂಖ್ಯೆ ೧೦ ಕ್ಕೆ ಏರಿದ್ದು, ಜನವರಿ ನಂತರದ ಅತಿ ಹೆಚ್ಚಿನ ಆದಿವಾಸಿಗಳ ಸಾವು ಸಂಭವಿಸಿದೆ.
ಬೆಳವಣಿಗೆ ಕುಂಟಿತದಿಂದ ಅಕಾಲಿಕ ಜನನ ಮತ್ತು ತಾಯಂದಿರ ಅಪೌಷ್ಟಿಕತೆಯೇ ಈ ಶಿಶುಗಳ ಸಾವಿಗೆ ಕಾರಣ ಅಲ್ಲದೆ ತಮ್ಮ ಗುಡಿಸಲುಗಳಲ್ಲಿಯೆ ಜನನ ನೀಡುವುದೂ ಇದಕ್ಕೆ ಕಾರಣ ಎನ್ನಲಾಗಿದೆ.
ಕಳೆದ ವರ್ಷ ಹಸಿಗೂಸುಗಳನ್ನು ಸೇರಿ ೭೩ ಮಕ್ಕಳು ಅಪೌಷ್ಟಿಕತೆ ಮತ್ತು ಇತರ ಕಾರಣಗಳಿಂದ ಅಟ್ಟಪಾಡಿಯಲ್ಲಿ ಜೀವ ಕಳೆದುಕೊಂಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದಿವಾಸಿಗಳಿಗೆ ಹಲವಾರು ಪರಿಹಾರ ಯೋಜನೆಗಳನ್ನು ಘೋಷಿಸಿದ್ದರೂ, ಮಕ್ಕಳ ಸಾವು ಈ ಭಾಗದಲ್ಲಿ ಆತಂಕ ಸೃಷ್ಟಿಸಿದೆ.