ಕತ್ತಲೆ ನಿವಾರಣೆಗೆ ಸುಗ್ರೀವಾಜ್ಞೆ
ಕಲ್ಲಿದ್ದಲು ಬ್ಲಾಕ್‌ಗಳ ರದ್ದತಿಯಿಂದ ತಲೆದೋರಿರುವ ಸಮಸ್ಯೆಯನ್ನು...
ನವದೆಹಲಿ: ಕಲ್ಲಿದ್ದಲು ಬ್ಲಾಕ್‌ಗಳ ರದ್ದತಿಯಿಂದ ತಲೆದೋರಿರುವ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ಬ್ಲಾಕ್‌ಗಳ ಮರು ಹಂಚಿಕೆ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದೆ.
ಈಗಾಗಲೇ ರದ್ದಾಗಿರುವ ಬ್ಲಾಕ್‌ಗಳ ಮಾಲೀಕರ ಬಳಿ ಭೂಮಿಯನ್ನು ವಾಪಸ್ ಪಡೆಯುವ ಸಂಬಂಧ ಈ ಸುಗ್ರೀವಾಜ್ಞೆ ಹೊರಡಸಲಾಗಿದೆ. ಅಂಕಿತಕ್ಕಾಗಿ ರಾಷ್ಟ್ರಪತಿ ಅವರ ಬಳಿ ರವಾನಿಸಲು ನಿರ್ಧರಿಸಲಾಗಿದೆ. ಸೋಮವಾರ ಸಂಜೆ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಶಪಡಿಸಿಕೊಳ್ಳುವ ಭೂಮಿಯನ್ನು ಇನ್ನು ಎರಡ್ಮೂರು ತಿಂಗಳಲ್ಲಿ ಇ ಹರಾಜು ಹಾಕಲಾಗುವುದು. ಇದರಿಂದ ಬಂದ ಆದಾಯವನ್ನು ರಾಜ್ಯಗಳೊಂದಿಗೆ ಹಂಚಿಕೆ ಮಾಡಿಕೊಳ್ಳಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ.
ದೇಶದ ಥರ್ಮಲ್ ಘಟಕಗಳಲ್ಲಿ ಕಲ್ಲಿದ್ದಲು ಸಮಸ್ಯೆ ತಲೆ ದೋರಿದ್ದು, ಇದರಿಂದಾಗಿ ವಿದ್ಯುತ್ ಅಭಾವ ಎದುರಾಗುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ಕ್ಷಿಪ್ರ ಗತಿಯಲ್ಲಿ ಇ ಹರಾಜು ಹಾಕುವ ಸಂಬಂಧ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.