440 ಹೊಸ ಗ್ರಾಮ ಪಂ. ರಚನೆಗೆ ಶಿಫಾರಸು
ಗ್ರಾಮ ಪಂಚಾಯ್ತಿಗಳ ಪುನರ್ ವಿಂಗಡಣಾ ವರದಿ ಸಿದ್ಧವಾಗಿದ್ದು, ಅಕ್ಬೋಬರ್ 28ರ ನಂತರ ವರದಿಯನ್ನು ಸರ್ಕಾರಕ್ಕೆ...
ಬೆಂಗಳೂರು: ಗ್ರಾಮ ಪಂಚಾಯ್ತಿಗಳ ಪುನರ್ ವಿಂಗಡಣಾ ವರದಿ ಸಿದ್ಧವಾಗಿದ್ದು, ಅಕ್ಬೋಬರ್ 28ರ ನಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ ಮತ್ತು ಈ ವರದಿಯನ್ನು ಚಳಿಗಾಲದ ಅಧಿವೇಶನದಲ್ಲಿಯೇ ಮಂಡಿಸುವ ಸಾಧ್ಯತೆ ಇದೆ.
ಎಸ್.ಐ. ನಂಜಯ್ಯನಮಠ ನೇತೃತ್ವದ ಸಮಿತಿ ಈ ವರದಿಯನ್ನು ಸಿದ್ಧಪಡಿಸಿದ್ದು, 2011ರ ಜನಗಣತಿಯ ಪ್ರಕಾರ ಗ್ರಾಮ ಪಂಚಾಯ್ತಿಗಳನ್ನು ಪುನರ್ ವಿಂಗಡಣೆ ಮಾಡಲಾಗಿದೆ.
ಬಯಲು ಸೀಮೆಯಲ್ಲಿ 5ರಿಂದ 7 ಸಾವಿರ ಜನಸಂಖ್ಯೆಗೆ ಒಂದು ಗ್ರಾಮ ಪಂಚಾಯ್ತಿ ಹಾಗೂ ಮಲೆನಾಡಿನಲ್ಲಿ 4 ಸಾವಿರ ಜನಸಂಖ್ಯೆಗೊಂದು ಗ್ರಾ.ಪಂ.ರಚನೆ ಮಾಡಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹೊಸದಾಗಿ 440 ಗ್ರಾಮ ಪಂಚಾಯ್ತಿಗಳ ರಚನೆ ಮಾಡುವ ಮೂಲಕ ಗ್ರಾ.ಪಂ.ಗಳ ಸಂಖ್ಯೆಯನ್ನು 6069ಕ್ಕೆ ಹೆಚ್ಚಿಸಬೇಕು ಎಂದು ವರದಿ ಶಿಫಾರಸು ಮಾಡಿದೆ. ಹೊಸದಾಗಿ ರಚನೆಯಾಗುವ 440 ಗ್ರಾ.ಪಂ.ಗಳಿಗೆ 2015ರಲ್ಲಿ ಚುನಾವಣೆ ನಡೆಯಲಿದೆ.