ಎಬೋಲಾ ಲಸಿಕೆ ತಯಾರಿಗೆ ಖ್ಯಾತ ಔಷಧಿ ಕಂಪನಿಗಳ ಸಾಥ್
ಖ್ಯಾತ ಔಷಧಿ ತಯಾರಿಕ ಕಂಪನಿಗಳು ...
ಲಂಡನ್: ಖ್ಯಾತ ಔಷಧಿ ತಯಾರಿಕ ಕಂಪನಿಗಳು ಇದೀಗ ಎಬೋಲಾ ಲಸಿಕೆ ತಯಾರಿಸಲು ಸಾಥ್ ನೀಡಲಿವೆ. ಮುಂದಿನ ವರ್ಷಕ್ಕೆ ದಶಕೋಟಿ ಲಸಿಕೆಗಳು ಅಗತ್ಯವಿರುವುದರಿಂದ ಮುಂಚೂಣಿಯಲ್ಲಿರುವ ಔಷಧಿ ತಯಾರಿಕಾ ಕಂಪನಿಗಳು ಎಬೋಲಾ ಲಸಿಕೆ ತಯಾರಿ ಮಾಡಲು ಮುಂದಾಗಿವೆ.
ಎಬೋಲಾ ಲಸಿಕೆ ತಯಾರಿಕೆಗಾಗಿ ಯುರೋಪ್ 200 ಮಿಲಿಯನ್ ಯೂರೋ ಧನ ಸಹಾಯವನ್ನು ನೀಡಲು ಯೋಚಿಸಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
ಅಮೆರಿಕದ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ಮುಂದಿನ ವರ್ಷ ಕನಿಷ್ಟ 1 ಮಿಲಿಯನ್ ಡೋಸ್ ಲಸಿಕೆ ತಯಾರಿಸಲು ಯೋಜನೆ ಹೂಡಿದ್ದು, ಈ ಯೋಜನೆಗೆ ಬ್ರಿಟನ್ನ ಗ್ಲ್ಯಾಕ್ಸೋ ಸ್ಮಿತ್ಕ್ಲೇನ್ ಜತೆ ಕೈಜೋಡಿಸುವ ಬಗ್ಗೆ ಯೋಚಿಸುತ್ತಿದೆ.
ಎಬೋಲಾ ಲಸಿಕೆ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣದ ಅಗತ್ಯವಿದ್ದು, ಲಸಿಕೆಯ ಪ್ರಯೋಗಾತ್ಮಕ ತಯಾರಿಗಳು ನಡೆದು ಬರುತ್ತಿದೆ.