ಮಹಾ ಸಿಎಂ ರೇಸ್ನಲ್ಲಿ ನಾನಿಲ್ಲ: ಗಡ್ಕರಿ
ಮಹಾರಾಷ್ಟ್ರದ ಮುಖ್ಯಮಂತ್ರಿ ರೇಸ್ನಲ್ಲಿ ನಾನಿಲ್ಲ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ...
ನವದೆಹಲಿ: ಮಹಾರಾಷ್ಟ್ರದ ಮುಖ್ಯಮಂತ್ರಿ ರೇಸ್ನಲ್ಲಿ ನಾನಿಲ್ಲ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ದೇವೇಂದ್ರ ಫಡ್ನಿಸ್ ಅವರ ಜತೆ ಮಾತುಕತೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಗಡ್ಕರಿ, ನಾನು ಸಿಎಂ ರೇಸ್ನಲ್ಲಿ ಇಲ್ಲ. ನಾನು ಮುಖ್ಯಮಂತ್ರಿಯಾಗಲು ಬಯಸುವುದಿಲ್ಲ. ಆದರೆ, ನಾನು ರಾಜ್ಯ ರಾಜಕಾರಣದತ್ತ ಆಸಕ್ತಿ ತೋರಿಸುವುದಿಲ್ಲ ಎಂದು ಜನರು ಹೇಳುವಾಗ ನನಗೆ ಬೇಸರವಾಗುತ್ತದೆ ಎಂದಿದ್ದಾರೆ.
ನಾನು ದೆಹಲಿಯಲ್ಲಿ ಖುಷಿಯಾಗಿದ್ದೇನೆ. ಆದಾಗ್ಯೂ, ಮಹಾರಾಷ್ಟ್ರಕ್ಕೆ ಹಿಂತಿರುಗುವ ಬಗ್ಗೆ ಯಾವುದೇ ಯೋಚನೆ ನಡೆಸಿಲ್ಲ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರ ಸಿಎಂ ಆಯ್ಕೆ ವಿಚಾರ ಬಂದಾಗಲೆಲ್ಲಾ ರೇಸ್ನಲ್ಲಿ ಗಡ್ಕರಿ ಇದ್ದಾರೆ ಎಂಬ ಮಾತು ಕೇಳಿ ಬಂದಿರುವುದು ಮಾತ್ರವಲ್ಲದೆ, ಶಾಸಕರು ಕೂಡಾ ಗಡ್ಕರಿಗೆ ಬೆಂಬಲ ಸೂಚಿಸಿ ಮಾತನಾಡಿದ್ದರು.
ಏತನ್ಮಧ್ಯೆ, ಮಹಾರಾಷ್ಟ್ರದ ಸಿಎಂ ಸ್ಥಾನಕ್ಕೆ ಫೆಡ್ನಿಸ್ ಅವರ ಹೆಸರೇ ಮುಂಚೂಣಿಯಲ್ಲಿದ್ದರೂ, ಶಾಸಕರ ಒತ್ತಾಯದ ಮೇರೆಗೆ ಗಡ್ಕರಿ ಹೆಸರು ಸಿಎಂ ರೇಸ್ನಲ್ಲಿರುವವರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತ್ತು.