ಕೊಹ್ಲಿ ಜತೆ ನಿಶ್ಚಿತಾರ್ಥ? ಈಗ ಮಾತಾಡಲ್ಲ ಅಂದ್ಳು ಅನುಷ್ಕಾ
ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ...
ಮುಂಬೈ: ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ತುಸು ಜಾಸ್ತಿಯೇ ಸದ್ದು ಮಾಡುತ್ತಿದ್ದೆ. ಹಾಗಂತ ಇಲ್ಲಿಯವರೆಗೆ ಅನುಷ್ಕಾ ಮತ್ತು ಕೊಹ್ಲಿ ನಡುವಿನ ಸಂಬಂಧ ಗುಟ್ಟಾಗಿಯೇನೂ ಉಳಿದಿಲ್ಲ. ಅವರಿಬ್ಬರೂ ಕೈ ಕೈಹಿಡಿದು ಸುತ್ತಾಡಿದ್ದು, ಒಂದೇ ಹೋಟೆಲ್‌ನಲ್ಲಿ ತಂಗಿದ್ದು ಎಲ್ಲವೂ ಜಗಜ್ಜಾಹೀರಾತಾಗಿತ್ತು. ಅವರಿಬ್ಬರೂ ಲವ್ ಮಾಡ್ತಾ ಇದ್ದಾರೆ ಎಂದು ಜನರು ಮಾತಾಡ್ತಾ ಇದ್ದರೂ ಈ ಜೋಡಿ ಮಾತ್ರ ತಮ್ಮ ಸಂಬಂಧದ ಬಗ್ಗೆ ಯಾವತ್ತೂ ಮೌನ ಮುರಿದಿಲ್ಲ.
ಆದರೆ ಇತ್ತೀಚೆಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಅಪ್ಪ ಅಮ್ಮ ಪರಸ್ಪರ ಭೇಟಿಯಾಗಿದ್ದು, ನಿಶ್ಚಿತಾರ್ಥದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ವದಂತಿ ಕೇಳಿ ಬರುತ್ತಿದೆ. ಹಾಗಾದರೆ ಕೊಹ್ಲಿ ಅನುಷ್ಕಾ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಾ?
ಈ ಬಗ್ಗೆ ಪಿಕೆ ಚಿತ್ರದ ಟೀಸರ್ ಬಿಡುಗಡೆಯ ವೇಳೆ ಅನುಷ್ಕಾ ಶರ್ಮಾರಲ್ಲಿ ಕೇಳಿದರೆ, ಇಂಥಾ ಪ್ರಶ್ನೆಗಳನ್ನು ಇಲ್ಲಿ ಕೇಳಬೇಡಿ. ಇದು ಸೂಕ್ತವಾದ ಜಾಗ ಅಲ್ಲ ಎಂದು ಹೇಳಿದ್ದಾರೆ.
ವೈಯಕ್ತಿಕ ವಿಷಯದ ಬಗ್ಗೆ ಉತ್ತರಿಸಲು ಅನುಷ್ಕಾ ನಿರಾಕರಿಸಿದಾಗ, ಪಿಕೆ ಚಿತ್ರದ ನಾಯಕ ಅಮೀರ್ ಖಾನ್ ಅಲ್ಲಿ ನಗೆ ಚಟಾಕಿ ಹಾರಿಸಿದ್ದಾರೆ. ಈ ಪ್ರಶ್ನೆಗೆ ಇಲ್ಲಿ ಉತ್ತರಿಸುವುದು ಸರಿಯಲ್ಲ, ಹಾಗಾದರೆ ನಾವು ಬೇರೆ ಕಡೆ ಹೋಗೋಣ, ನಮಗಂತೂ ಈ ಪ್ರಶ್ನೆಗೆ ಉತ್ತರ ಬೇಕೇ ಬೇಕು ಎಂದು ಅಮೀರ್ ಅನುಷ್ಕಾಳ ಕಾಲೆಳೆದು ನಗೆಯುಕ್ಕಿಸಿದ್ದಾರೆ.
ಆದಾಗ್ಯೂ, ಪಿಕೆ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ತಮ್ಮ ಲವ್ ಲೈಫ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಎಲ್ಲದಕ್ಕೂ ಅನುಷ್ಕಾ ಮೌನವನ್ನೇ ಉತ್ತರವಾಗಿಸಿಕೊಂಡಿದ್ದರು ಎಂಬುದು ಸದ್ಯದ ಸುದ್ದಿ.