ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಏಷಿಯಾದಲ್ಲಿ ವಿಶ್ವ ಬ್ಯಾಂಕ್ ಗೆ ಪರ್ಯಾಯ ಸೃಷ್ಟಿಸಿದ ಚೈನಾ: ಮೂರು ಪ್ರಮುಖ ರಾಷ್ಟ್ರಗಳ ಗೈರು

ಚೈನಾ ಬೆಂಬಲದಿಂದ ಪ್ರಾರಂಭವಾಗುತ್ತಿರುವ ಏಶಿಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (Asian Infrastructure Investment Bank)ನ ...

Updated On : 24 Oct 2014, 1:21 am

ಶಾಂಗೈ: ಚೈನಾ ಬೆಂಬಲದಿಂದ ಪ್ರಾರಂಭವಾಗುತ್ತಿರುವ ಏಶಿಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (Asian Infrastructure Investment Bank)ನ ಉದ್ಘಾಟನೆಯಲ್ಲಿ ಶುಕ್ರವಾರ ಆಸ್ಟ್ರೆಲಿಯಾ, ಇಂಡೋನೇಶಿಯಾ ಮತ್ತು ದಕ್ಷಿಣ ಕೊರಿಯಾ ದೇಶಗಳು ಗೈರು ಹಾಜರಾಗಿದ್ದವು. ಪೂರ್ವ ದೇಶದ ಬ್ಯಾಂಕ ಗಳಿಗೆ ಪರ್ಯಾಯವಾಗಿ ತಲೆ ಎತ್ತುತ್ತಿರುವ ಈ ಬ್ಯಾಂಕಿನ ಅಮೇರಿಕಾ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿದೆ.

ಚೈನಾ ಪ್ರಸ್ತಾಪಿಸಿರುವ ಈ ೫೦ ಬಿಲಿಯನ್ ಯು ಎಸ್ ಡಾಲರ್ ನ ಏಶಿಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎ ಐ ಐ ಬಿ) ವಾಷಿಂಗಟನ್ ಕೃಪಾಪೋಷಿತ ವಿಶ್ವ ಬ್ಯಾಂಕ್ (ವರ್ಲ್ಡ್ ಬ್ಯಾಂಕ್) ಮತ್ತು ಏಶಿಯನ್ ಅಭಿವೃದ್ಧಿ ಬ್ಯಾಂಕ್ (ಎ ಡಿ ಬಿ) ಗಳಿಗೆ ಸವಾಲಾಗಲಿದೆ ಎನ್ನಲಾಗಿದೆ.

ಮೀಡಿಯಾ ಮೂಲಗಳ ಪ್ರಕಾರ ಅಮೇರಿಕಾ ಕಾರ್ಯದರ್ಶಿ ಜಾನ್ ಕರ್ರಿ ಚೈನಾ ಪ್ರಸ್ತಾಪಿಸಿರುವ ಬ್ಯಾಂಕ್ ನಿಂದ ಹೊರಗುಳಿಯುವಂತೆ ಆಸ್ಟ್ರೆಲಿಯಾ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ಏಷಿಯಾದಲ್ಲಿ ವಾಷಿಂಗಟನ್ ನ ಮೈತ್ರಿ ದೇಶವಾದ ದಕ್ಷಿಣ ಕೊರಿಯಾ ಎ ಐ ಡಿ ಬಿ ಬ್ಯಾಂಕನ್ನು ಸೇರಲಿದೆಯೇ ಎಂಬುದನ್ನು ಇನ್ನು ತಿಳಿಸಬೇಕಿದೆ.

ಬೀಜಿಂಗ್ ನಲ್ಲಿ ಉದ್ಘಾಟನೆಯಾದ ಎ ಐ ಐ ಬಿ ಯಲ್ಲಿ ಚೈನಾದ ವಿತ್ತ ಮಂತ್ರಿ ಭಾಗಿಯಾಗಿದ್ದರು ಹಾಗು ಭಾರತ, ಥೈಲಾಂಡ್, ಮಲೇಶಿಯಾ ಸೇರಿದಂತ ೨೧ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅಭಿವೃದ್ಧಿಗೊಳ್ಳುತ್ತಿರುವ ರಾಷ್ಟ್ರಗಳಿಗೆ ಸಾಲ ಕೊಡುವ ಮುಖ್ಯ ಯೋಜನೆ ಬ್ಯಾಂಕ್ ನದ್ದಾಗಿದೆ. ಬ್ಯಾಂಕ್ ನಲ್ಲಿ ಚೈನಾದ್ದು ೫೦% ಶೇರ್ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement