ಲಂಡನ್ ನಲ್ಲಿ ಕಾಶ್ಮೀರದ ಸ್ವಾಯತ್ತತೆ ನಡಿಗೆ: ಭಿಲಾವಲ್ ಭುಟ್ಟೋಗೆ ತಡೆ
ಕಾಶ್ಮೀರದಲ್ಲಿ ಭಾರತದ ಹಿಡಿತವನ್ನು ವಿರೋಧಿಸಿ ಲಂಡನ್ ನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ, ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕ ಭಿಲಾವಲ್ ಭುಟ್ಟೊ ಕಾಣಿಸಿಕೊಂಡ...
ಲಂಡನ್: ಕಾಶ್ಮೀರದಲ್ಲಿ ಭಾರತದ ಹಿಡಿತವನ್ನು ವಿರೋಧಿಸಿ ಲಂಡನ್ ನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ, ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕ ಭಿಲಾವಲ್ ಭುಟ್ಟೊ ಕಾಣಿಸಿಕೊಂಡ ನಂತರ ಹಿಂಸೆಗೆ ತಿರುಗಿದ ಘಟನೆ ನಡೆದಿದೆ. ಟ್ರಫಲ್ಗರ್ ವೃತ್ತದಿಂದ ಡೌವ್ನಿಂಗ್ ಬೀದಿಯೆಡೆಗೆ ತೆರಳುತ್ತಿದ್ದ ನಡಿಗೆಗೆ ಈ ನಾಯಕ ಸೇರಿಕೊಂಡಾಗ, ನೀರಿನ ಬಾಟಲ್ ಗಳ, ಕ್ಯಾನ್ ಗಳ ಸ್ವಾಗತ ಸಿಕ್ಕಿ ಭದ್ರತೆಯೊಂದಿಗೆ ಅವರನ್ನು ಸುರಕ್ಷಿತ ಜಾಗಕ್ಕೆ ಕರೆದುಕೊಂಡ ಹೋಗಲಾಗಿದೆ.
ಮಿಲಿಯನ್ ಮಾರ್ಚ್ ಎಂದು ಕರೆಯಲಾಗಿದ್ದ ಈ ನಡಿಗೆಯ ತಾತ್ಕಾಲಿಕ ವೇದಿಕೆಗೆ ಮಾತನಾಡಲು ಭಿಲಾವಲ್ ಭುಟ್ಟೊ ಜರ್ದಾರಿ ಕಾಣಿಸಿಕೊಂಡಾಗ ಸಭೆ ಅಸ್ಥವ್ಯಸ್ಥಗೊಂಡಿದೆ.
"ಇದು ಕಾಶ್ಮೀರಿಗಳ ಕಲ್ಯಾಣಕ್ಕೆ ಕಾಶ್ಮೀರಿಗಳು ನಡೆಸಿದ ನಡಿಗೆ. ಭಿಲಾವಲ್ ಭುಟ್ಟೋಗು ಇದಕ್ಕೂ ಯಾವುದೇ ಸಂಬಧ ಇಲ್ಲ" ಎಂದು ಅಲ್ಲಿ ನೆರಿದಿದ್ದ ಕೋಪಗೊಂಡ ಯುವಕರ ಪಡೆ ಹೇಳಿದೆ.
ಈ ಪಥನಡಿಗೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಾಜಿ ಪ್ರಧಾನಮಂತ್ರಿ ಬ್ಯಾರಿಶ್ಟರ್ ಸುಲ್ತಾನ್ ಮಹಮದ್ ಚೌದರಿ ಅವರ ನಾಯಕತ್ವ ಇತ್ತು ಮೀರ್ ಪುರಿ ಮೂಲದ ಬ್ರಿಟಿಶ್ ಶಾಸಕ ಲಾರ್ಡ್ ನಾಜಿರ್ ಅಹಮದ್ ಅವರ ಬೆಂಬಲ ಕೂಡ ಇತ್ತು.