10 ಪ್ರಮುಖ ರಾಜಕೀಯ ಹತ್ಯೆಗಳು
ಯಾವುದೇ ಕ್ಷೇತ್ರವಿರಲಿ. ರಾಜಕೀಯ ಕ್ಷೇತ್ರದಲ್ಲಿನ ಆಗುಹೋಗುಗಳಿಗೆ...
ಯಾವುದೇ ಕ್ಷೇತ್ರವಿರಲಿ. ರಾಜಕೀಯ ಕ್ಷೇತ್ರದಲ್ಲಿನ ಆಗುಹೋಗುಗಳಿಗೆ ವಿಶ್ವದಲ್ಲಿ ಪ್ರಾಧಾನ್ಯತೆ ಇರುತ್ತದೆ. ಕೇರಳದಲ್ಲಿ ಆರ್ ಎಸ್ಎಸ್ ನ ನಿಯತಕಾಲಿಕದಲ್ಲಿ ಬಿಜೆಪಿ ನಾಯಕ ಕೆ.ಬೇ ಗೋಪಾಲಕೃಷ್ಣನ್ 'ನಾಥೂರಾಮ್ ಗೋಡ್ಸೆ' ಮಾಹಾತ್ಸಾ ಗಾಂಧಿಯವರನ್ನು ಬಿಟ್ಟು ನೆಹರೂ ಅವರನ್ನು ಕೊಲ್ಲಬೇಕಿತ್ತು ಎಂದು ಬರೆದಿರುವ ಲೇಖನ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಜಗತ್ತಿನಲ್ಲಿ ಪ್ರಾಮುಖ್ಯತೆ ಪಡೆದಿರುವ ಹತ್ತು ರಾಜಕೀಯ ನಾಯಕರ ಹತ್ಯೆಗಳನ್ನು ವಿವರಿಸಲಾಗಿದೆ.
1.ಅಬ್ರಹಾಂ ಲಿಂಕನ್ (ಅಮೆರಿಕ)
ಹಾನೆಸ್ಟ್ ಅಬೆ ಎಂಬ ಅಡ್ಡ ಹೆಸರು ಹೊಂದಿದ್ದ ಇವರು ಅಮೆರಿಕದ 16ನೇ ಅಧ್ಯಕ್ಷ. ಜೀತ ಪದ್ಧತಿ ನಿರ್ಮೂಲನೆ ಮಾಡಿದ ಹೆಗ್ಗಳಿಕೆ ಅವರದ್ದು. 1865ರ ಏ.14ರಂದು ಹಂತಕನ ಗುಂಡಿಗೆ ಬಲಿಯಾದರು.
2.ಥಾಮಸ್ ಡಿ' ಆರ್ಕಿಮೆಕ್ಗೀ (ಕೆನಡಾ)
ಥಾಮಸ್ ಓರ್ವ ಪತ್ರಕರ್ತರೂ ಹೌದು. ಐರ್ಲೆಡ್ ಹಾಗೂ ಕೆನಡಾದ ಗುರುತಿಗಾಗಿ ಹೋರಾಡಿ ಯಶಸ್ಸು ಕಂಡವರು. ಕೆನಡಾಕ್ಕೆ ಆಧುನಿಕತೆ, ಆರ್ಥಿಕ ಸ್ವಾವಲಂಬನೆ ತಂದವರು. 1868ರ ಏ.7ರಂದು ತಮ್ಮ ನಿವಾಸದ ಮುಂದೆ ಹತ್ಯೆಗೀಡಾದರು.
3.ಮಹಾತ್ಮ ಗಾಂಧಿ (ಭಾರತ)
ಭಾರತದ ಸ್ವಾತಂತ್ರ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದವರು. ಸತ್ಯ, ಅಹಿಂಸೆ ಮಂತ್ರದ ಮೂಲಕ ಇಡೀ ವಿಶ್ವದ ಗಮನ ಸೆಳೆದವರು. 1948ರ ಜನ.30ರಂದು ನಾಥುರಾಮ್ ಗೋಡ್ಸೆ ಗುಂಡಿಗೆ ಬಲಿಯಾದರು.
4.ಲಿಯಾಖತ್ ಅಲಿ ಖಾನ್ (ಪಾಕಿಸ್ತಾನ್)
ಪಾಕಿಸ್ತಾನದ ಮೊದಲ ಪ್ರಧಾನಿ. ಪಾಕಿಸ್ತಾನ ಜನಕ ಮಹಮ್ಮದ್ ಅಲಿ ಜಿನ್ನಾರ ಬಲಗೈ ಬಂಟ ಎಂಬ ಹೆಗ್ಗುರುತು. ಆಧುನಿಕ ಪಾಕಿಸ್ತಾನದ ಶಿಲ್ಪಿಗಳಲೊಬ್ಬರು. 1951ರ ಅ.16ರಂದು ಹಂತಕನ ಗುಂಡಿಗೆ ಬಲಿಯಾದರು.
5.ಜಾನ್ ಎಫ್. ಕೆನಡಿ (ಅಮೆರಿಕ)
ಅಮೆರಿಕದ 35ನೇ ಅಧ್ಯಕ್ಷ. 1961ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. 1963ರ ನ.22ರಂದು ಹಂತಕನ ಗುಂಡಿಗೆ ಬಲಿಯಾದರು.
6.ಮಾರ್ಟಿನ್ ಕಿಂಗ್ ಜೂನಿಯರ್ (ಅಮೆರಿಕ)
ಆಫ್ರಿಕಾ ಮೂಲದ ಅಮೆರಿಕದವರ ಮೂಲಭೂತ ಹಕ್ಕುಳಿಗಾಗಿ ಹೋರಾಡಿದ ವ್ಯಕ್ತಿ. ಅದಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದವರು. 1968ರ ಏ. 4ರಂದು ಹತ್ಯೆಗೀಡಾದವರು.
7.ಕಿಂಗ್ ಫೈಸಲ್ (ಸೌದಿ ಅರೇಬಿಯಾ)
1964ರಿಂದ 1975ರವರೆಗೆ ಸೌದಿ ಅರೇಬಿಯಾದ ರಾಜರಾಗಿದ್ದವರು. ದೇಶಕ್ಕೆ ಒದಗಿದ್ದ ಆರ್ಥಿಕ ಮುಗ್ಗಟ್ಟನ್ನು ನಿವಾರಿಸಿದ್ದರು. ಆಧುನಿಕತೆಗೆ ಶ್ರೀಕಾರ ಹಾಕಿ ರಾಷ್ಟ್ರಕ್ಕೆ ಅಭಿವೃದ್ಧಿ ಮುಗ್ಗಟ್ಟನ್ನು ನಿವಾಹಿರಿದ್ದರು. ಆಧುನಿಕತೆಗೆ ಶ್ರೀಕಾರ ಹಾಕಿ ರಾಷ್ಟ್ರಕ್ಕೆ ಅಭಿವೃದ್ಧಿ ಪಥ ತೋರಿದವರು. ತಮ್ಮ ಸೋದರ ಸಂಬಂಧಿಯಿಂದಲೇ 1975ರ ಮಾ.25ರಂದು ಹತ್ಯೆಯಾದರು.
8.ಇಂದಿರಾಗಾಂಧಿ (ಭಾರತ)
ಒಟ್ಟು ಮೂರು ಬಾರಿ ಪ್ರಧಾನಿಯಾಗಿ ಆಯ್ಕೆ. ವಿಶ್ವದ 2ನೇ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆ. 1984ರ ಅ.31ರಂದು ತಮ್ಮ ಅಂಗರಕ್ಷಕರಿಂದಲೇ ಹತ್ಯೆಗೀಡಾದರು.
9.ರಾಫಿಕ್ ಹರಿರಿ (ಲೆಬನಾನ್)
2 ಬಾರಿ ಲೆಬನಾನ್ ಪ್ರಧಾನಿಯಾಗಿದ್ದವರು. ಯುದ್ಧಗಳಿಂದ ಧ್ವಂಸಗೊಂಡಿದ್ದ ಬೈರೂತ್ ನಗರದ ಪುನರುತ್ಥಾನದ ರೂವಾರಿ ಎಂಬ ಹೆಗ್ಗಳಿಕೆ ಪಡೆದವರು. 2005ರ ಫೇ.14ರಂದು ಬಾಂಬ್ ಸ್ಫೋಟದಲ್ಲಿ ಹತ್ಯೆಗೊಳಗಾದರು.
10. ಬೆನಜೀರ್ ಭುಟ್ಟೊ (ಪಾಕಿಸ್ತಾನ)
ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಅಧ್ಯಕ್ಷೆ. ಪಾಕಿಸ್ತಾನದ 11ನೇ ಪ್ರಧಾನಿ. ಜನಪ್ರಿಯ ಮಹಿಳಾ ರಾಜಕಾರಣಿ. 2007ರ ಡಿ.27ರಂದು ಉಗ್ರರ ಗುಂಡಿಗೆ ಬಲಿಯಾದರು.