ನ.24ಕ್ಕೆ ಸಂಸತ್ ಚಳಿಗಾಲದ ಅಧಿವೇಶನ ಶುರು
ಸಂಸತ್ನ ಚಳಿಗಾಲದ ಅಧಿವೇಶನವು ನವೆಂಬರ್ 124ಕ್ಕೆ ಆರಂಭವಾಗಿ ಡಿಸೆಂಬರ್ 23ಕ್ಕೆ ಮುಕ್ತಾಯಗೊಳ್ಳಲಿದೆ...
ನವದೆಹಲಿ: ಸಂಸತ್ನ ಚಳಿಗಾಲದ ಅಧಿವೇಶನವು ನವೆಂಬರ್ 124ಕ್ಕೆ ಆರಂಭವಾಗಿ ಡಿಸೆಂಬರ್ 23ಕ್ಕೆ ಮುಕ್ತಾಯಗೊಳ್ಳಲಿದೆ.
ಸೋಮವಾರ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಂಸದೀಯ ವ್ಯವಹಾರಗಳ ಸಚಿವ ಸಂಪುಟ ಸಭೆಯಲ್ಲಿ ಈ ದಿನಾಂಕಗಳನ್ನು ನಿಗದಿ ಪಡಿಸಲಾಗಿದೆ.
ಒಂದು ತಿಂಗಳ ಕಾಲ ನಡೆಯಲಿರುವ ಆ ಅಧಿವೇಶನದಲ್ಲಿ 22 ಸಮಾವೇಶಗಳಿರುತ್ತವೆ. ಆದಾಗ್ಯೂ, ರಾಜ್ಯಸಭೆಯ 59 ಮತ್ತು ಲೋಕಸಭೆಯ 8 ಮಸೂದೆ ಅಂದರೆ ಒಟ್ಟು 67 ಮಸೂದೆಗಳು ಆ ಅಧಿವೇಶನದಲ್ಲಿ ಚರ್ಚೆಗೊಳಪಡಲಿವೆ.
ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಎರಡನೇ ಬಾರಿ ನಡೆಯುತ್ತಿರುವ ಮಹತ್ತರವಾದ ಅಧಿವೇಶನವಾಗಿದೆ.