ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಹಾ ಸಿಎಂ ರೇಸ್‌ನಲ್ಲಿ ನಾನೂ ಸ್ಪರ್ಧಿ: ಏಕ್‌ನಾಥ್ ಖಾಡ್ಸೆ

ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಯಾರಾಗ್ತಾರೆ? ಎಂಬ ಪ್ರಶ್ನೆಗೆ ದೇವೇಂದ್ರ ಫೆಡ್ನವಿಸ್ ಎಂಬ ಉತ್ತರವೇ ಇಲ್ಲಿಯವರೆಗೆ ಬರುತ್ತಿತ್ತು...

Rashmi Kasaragodu
Updated On : 28 Oct 2014, 2:47 am

ಮುಂಬೈ:  ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಯಾರಾಗ್ತಾರೆ? ಎಂಬ ಪ್ರಶ್ನೆಗೆ ದೇವೇಂದ್ರ ಫೆಡ್ನವಿಸ್ ಎಂಬ ಉತ್ತರವೇ ಇಲ್ಲಿಯವರೆಗೆ ಬರುತ್ತಿತ್ತು. ಆದರೆ ಇದೀಗ ಸಿಎಂ ರೇಸ್‌ನಲ್ಲಿ ಫೆಡ್ನವಿಸ್ ಮಾತ್ರ ಅಲ್ಲ ನಾನೂ ಇದ್ದೇನೆ ಎಂದು ಮಹಾರಾಷ್ಟ್ರದ ಹಿರಿಯ ನಾಯಕ ಏಕ್‌ನಾಥ್ ಖಾಡ್ಸೆ  ಹೇಳಿದ್ದಾರೆ.

ಕಳೆದ ಎರಡು ವಾರಗಳಿಂದ ಸಿಎಂ ರೇಸ್‌ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೆಸರೂ ಕೇಳಿ ಬರುತ್ತಿತ್ತು. ಆದರೆ ತಾನು ರೇಸ್‌ನಲ್ಲಿ ಇಲ್ಲ ಎಂದು ಗಡ್ಕರಿ ಸ್ಪಷ್ಟ ಪಡಿಸಿರುವುದರಿಂದ ಫೆಡ್ನವಿಸ್‌ಗೆ ಮುಖ್ಯಮಂತ್ರಿ ಪಟ್ಟ ಬಹುತೇಕ ಖಚಿತವಾಗಿತ್ತು.

ಮಂಗಳವಾರ ಮಧ್ಯಾಹ್ನ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನೂತನವಾಗಿ ಚುನಾಯಿತರಾದ 120 ಶಾಸಕರು ಮುಖ್ಯಮಂತ್ರಿಯವರನ್ನು ಆಯ್ಕೆ ಮಾಡಲು ಸಭೆ ಸೇರಿದ್ದರು. ಈ ವೇಳೆ ಖಾಡ್ಸೆ ಅವರು ತಾನೂ ಮುಖ್ಯಮಂತ್ರಿ ರೇಸ್‌ನಲ್ಲಿದ್ದೇನೆ. ಪಕ್ಷದ ನಿರ್ಧಾರವನ್ನು ಏನಿದೆಯೋ ಅದನ್ನು ಗೌರವಿಸುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಆದಾಗ್ಯೂ, ಖಾಡ್ಸೆ ಅವರು ಫೆಡ್ನವಿಸ್ ಅವರಿಗೆ ಪ್ರಬಲ ಸ್ಪರ್ಧಿ ಎಂದು ನಾವು ಪರಿಗಣಿಸುವುದಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.

ಉತ್ತರ ಮಹಾರಾಷ್ಟ್ರದವರಾಗಿರುವ 65ರ ಹರೆಯದ ಖಾಡ್ಸೆ, ಶಾಸಕಾಂಗ ಸಭೆಯಲ್ಲಿ  ವಿಪಕ್ಷ ನೇತಾರರಾಗಿ ಕಾರ್ಯ ನಿರ್ವಹಿಸಿದ್ದರು.

ಅಂತೂ ಒಟ್ಟಿನಲ್ಲಿ ಮಂಗಳವಾರ ಸಂಜೆ ವೇಳೆಗೆ ಮಹಾ ಸಿಎಂ ಆಯ್ಕೆ ನಡೆಯಲಿದ್ದು ಶುಕ್ರವಾರ ವಾಂಖೆಡೆ ಸ್ಟೇಡಿಯಂನಲ್ಲಿ ಪ್ರತಿಜ್ಞಾ ಸ್ವೀಕಾರ ಸಮಾರಂಭ ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement