ನನಗೀಗ ದೆಹಲಿ ರಾಜಕಾರಣದಲ್ಲಿ ಆಸಕ್ತಿ ಇಲ್ಲ: ಶೀಲಾ ದೀಕ್ಷಿತ್
"ನನಗೀಗ ದೆಹಲಿ ರಾಜಕಾರಣದಲ್ಲಿ ಆಸಕ್ತಿಯಿಲ್ಲ" -ಹೀಗೆ ಹೇಳಿದವರು ಬೇರ್ಯಾರೂ ಅಲ್ಲ, ದೆಹಲಿಯ ಮಾಜಿ ...
ನವದೆಹಲಿ: "ನನಗೀಗ ದೆಹಲಿ ರಾಜಕಾರಣದಲ್ಲಿ ಆಸಕ್ತಿಯಿಲ್ಲ" -ಹೀಗೆ ಹೇಳಿದವರು ಬೇರ್ಯಾರೂ ಅಲ್ಲ, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್.
ನವದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಶೀಲಾ ದೀಕ್ಷಿತ್ 15 ವರ್ಷಗಳ ಕಾಲ ಅಧಿಕಾರ ನಡೆಸಿದ್ದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಶೀಲಾ, ಚುನಾವಣೆ ಬಂದರೆ, ಕಾಂಗ್ರೆಸ್ ಸ್ಪರ್ಧಿಸಿಲಿದೆ, ಉತ್ತಮವಾಗಿಯೇ ಸ್ಪರ್ಧೆಯನ್ನೊಡ್ಡಲಿದೆ ಎಂದು ಹೇಳಿದ್ದಾರೆ.
2013 ಡಿಸೆಂಬರ್ನಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸೀಟುಗಳಲ್ಲಿ ಕಾಂಗ್ರೆಸ್ ಕೇವಲ 8 ಸೀಟುಗಳನ್ನು ಗಳಿಸಿಕೊಂಡಿತ್ತು.
ಸದ್ಯ ಅತಂತ್ರದಲ್ಲಿರುವ ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚಿಸಲಿ ಎಂದು ರಾಜ್ಯಪಾಲ ನಜೀಬ್ ಜಂಗ್ರ ನಿರ್ಧಾರಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಅಂಕಿತವೂ ಸಿಕ್ಕಿದೆ.
ದೆಹಲಿ ವಿಧಾನಸಭೆಯಲ್ಲಿ ಬಿಜೆಪಿಗೆ 29 ಶಾಸಕರು ಮತ್ತು ಆಪ್ಗೆ 27 ಶಾಸಕರು ಇದ್ದಾರೆ. ಯಾವುದೇ ಪಕ್ಷಕ್ಕೆ ಸರ್ಕಾರ ರಚನೆ ಮಾಡಬೇಕಾದರೆ ಕನಿಷ್ಠ 36 ಶಾಸಕರ ಬೆಂಬಲ ಬೇಕಾಗಿದೆ.