ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

81ನೇ ಕನ್ನಡ ನುಡಿ ಜಾತ್ರೆ ಹಾವೇರಿಯಲ್ಲಿ ನಡೆಯಲ್ಲ

ಹಾವೇರಿ ಹಾಗೂ ರಾಣೆಬೆನ್ನೂರಿನ ಸದಸ್ಯರ ಕಲಹದೊಂದಿಗೆ ಕನ್ನಡ...

Lingaraj Badiger
Updated On : 28 Oct 2014, 10:50 am

ಬೆಂಗಳೂರು: ಹಾವೇರಿ ಹಾಗೂ ರಾಣೆಬೆನ್ನೂರಿನ ಸದಸ್ಯರ ಕಲಹದೊಂದಿಗೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿ ಜಿಲ್ಲೆಯಲ್ಲಿ ನಡೆಸುವ ತೀರ್ಮಾನ ರದ್ದಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸೋಮವಾರ ಅಧ್ಯಕ್ಷ ಪುಂಡಲೀಕ ಹಾಲಂಬಿ ನೇತೃತ್ವದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆ ಕಲಹಕ್ಕೆ ಕಾರಣವಾಯಿತು. ಕಲಹದ ನಡುವೆಯೇ ಹಾವೇರಿ ಜಿಲ್ಲೆಯಲ್ಲಿ ಸಮ್ಮೇಳನ ನಡೆಸುವ ಪ್ರಸ್ತಾಪ ಕೈ ಬಿಡಲಾಯಿತು. ತೀರ್ಮಾನ ಪ್ರಕಟಿಸಿದ ಕೂಡಲೇ ರಾಣೆಬೆನ್ನೂರು ಹಾಗೂ ಹಾವೇರಿಯಿಂದ ಬಂದಿದ್ದ ಸದಸ್ಯರ ನಡುವೆ ಜಗಳ ಆರಂಭವಾಗಿ ಅವಾಚ್ಯ ಶಬ್ದಗಳ ಪ್ರಯೋಗವೂ ನಡೆಯಿತು. ಎರಡೂ ಕಡೆಯವರು ಕೈಕೈ ಮಿಲಾಯಿಸಿದ್ದೂ ಆಯಿತು.

ಮಧ್ಯಾಹ್ನ ಆರಂಭವಾದ ಸಭೆಯಲ್ಲಿ ಮೊದಲಿಗೆ ಮಾತನಾಡಿದ ಅಧ್ಯಕ್ಷ ಪುಂಡಲೀಕ ಹಾಲಂಬಿ, 81ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಕುರಿತು ಗೊಂದಲ ಉಂಟಾಗಿರುವುದು ಹಾಗೂ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿರುವುದರಿಂದ ಹಾವೇರಿಯಲ್ಲಿ ಸಮ್ಮೇಳನ ನಡೆಸದಿರಲು ತೀರ್ಮಾನಿಸಲಾಗಿದೆ. ಶತಮಾನೋತ್ಸವ ಅಂಗವಾಗಿ ನ.16 ಹಾಗೂ 17ರಂದು ಬೇಲೂರಿನಲ್ಲಿ ಸಾಹಿತ್ಯ ಕಾರ್ಯಕ್ರಮ ನಡೆಯಲಿದ್ದು, ಅಂದೇ ಕಾರ್ಯಕಾರಿ ಸಮಿತಿ ಸಭೆಯೂ ನಡೆಯಲಿದೆಯ ಹಾವೇರಿ ಜಿಲ್ಲೆ ಹೊರತುಪಡಿಸಿ ಉಳಿದ 29 29 ಜಿಲ್ಲೆಗಳಿಂದ ಅಧ್ಯಕ್ಷರು ಹಾಗೂ ಸದಸ್ಯರನ್ನು ಕರೆದು ಚರ್ಚಿಸಲಾಗುವುದು ಎಂದರು. ಅಲ್ಲದೆ ಎಲ್ಲ ಜಿಲ್ಲೆಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಕೆ ನಂತರ ಸ್ಥಳ ಪರಿಶೀಲನೆ ಹಾಗೂ ಅನುಕೂಲತೆಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಹಾವೇರಿ ಜಿಲ್ಲೆಯನ್ನು ಕೈ ಬಿಡಲಾಗುವುದು ಎಂದು ಪ್ರಕಟಿಸುತ್ತಿದ್ದಂತೆ ಆಕ್ರೋಶಗೊಂಡ ರಾಣೆಬೆನ್ನೂರಿನ ಜಯದೇವ ಎಂಬುವವರು ಸಭೆಯಿಂದ ಹೊರ ನಡೆದರು. ಜಯದೇವ ಅವರೊಂದಿಗೆ ಸೇರಿಕೊಂಡ ಬೆಂಬಲಿಗರು ನಿರ್ಣಯವನ್ನು ವಿರೋಧಿಸಿ ಷೋಷಣೆಗಳನ್ನು ಕೂಗಿದರು.

ಈ ಹಿಂದೆ ಹಾವೇರಿಯಲ್ಲಿ ಸಭೆ ನಡೆದಾಗ, ಧಾರವಾಡದಲ್ಲಿ ಸಭೆ ನಡೆದಾಗ ಗೊಂದಲ ಉಂಟಾಗಿತ್ತು. ರಾಣೆಬೆನ್ನೂರು ಅಥವಾ ಹಾವೇರಿಯಲ್ಲಿ ನಡೆಸಬೇಕೇ ಎಂಬ ಬಗ್ಗೆ ತೀವ್ರ ವಾಗ್ದಾದವಾಗಿತ್ತು. ಆದರೆ ಮತ್ತೆ ನಡೆದ ಸಭೆಯಲ್ಲಿ ಹಿಂದಿನ ಘಟನೆಯೇ ಮರುಕಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement