ಅಡುಗೆ ಅನಿಲ ಸಿಲಿಂಡರ್ ದರ ರು.3 ಏರಿಕೆ
ಅಡುಗೆ ಅನಿಲ (ಎಲ್‌ಪಿಜಿ) ಡೀಲರ್‌ಗಳಿಗೆ ಕಮಿಷನ್ ಏರಿಕೆ ಮಾಡಿರುವ ಕಾರಣ ಇದೀಗ ಅನಿಲ ಬೆಲೆಯಲ್ಲಿ ರು.3 ಏರಿಕೆ ಮಾಡಲಾಗಿದೆ...
ನವದೆಹಲಿ: ಅಡುಗೆ ಅನಿಲ (ಎಲ್‌ಪಿಜಿ) ಡೀಲರ್‌ಗಳಿಗೆ ಕಮಿಷನ್ ಏರಿಕೆ ಮಾಡಿರುವ ಕಾರಣ ಇದೀಗ ಅನಿಲ ಬೆಲೆಯಲ್ಲಿ ರು.3 ಏರಿಕೆ ಮಾಡಲಾಗಿದೆ.
ಕಳೆದ ವಾರ ಸಿಲಿಂಡರ್‌ವೊಂದಕ್ಕೆ ಡೀಲರ್‌ಗಳಿಗೆ ನೀಡುವ ಹಣದಲ್ಲಿ ಏರಿಕೆ ಮಾಡಲಾಗಿತ್ತು. ಡೀಲರ್‌ಗಳ ಕಮಿಷನ್ ಹಣದಲ್ಲಿ ಏರಿಕೆ ಮಾಡಿರುವುದರಿಂದ ಅನಿಲದರ ಏರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏರಿಕೆಯಾಗಿರುವ ದರ ಅಕ್ಟೋಬರ್ 23 ರಿಂದಲೇ ಜಾರಿಯಾಗಿದೆ ಎಂದು ಬಲ್ಲಮೂಲಗಳು ಹೇಳಿದ್ದಾರೆ.
ದೆಹಲಿಯಲ್ಲಿ 14.3 ಕೆ.ಜಿ ಸಿಲಿಂಡರ್ ಬೆಲೆ ರು.417 ಕ್ಕೇರಿದ್ದು, ಮುಂಬೈನಲ್ಲಿ ಸಿಲಿಂಡರ್‌ನ ಬೆಲೆ ರು. 452 ಆಗಿದೆ.