ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನೈತಿಕ ಪೊಲೀಸರ ವಿರುದ್ಧ 'ಕಿಸ್ ಆಫ್ ಲವ್ ' ಪ್ರತಿಭಟನೆ

ಕೇರಳದಲ್ಲಿ ನೈತಿಕ ಪೊಲೀಸರ ಅಟ್ಟಹಾಸ..

Rashmi Kasaragodu
Updated On : 29 Oct 2014, 5:09 am

ತಿರುವನಂತಪುರಂ: ಕೇರಳದಲ್ಲಿ ನೈತಿಕ ಪೊಲೀಸರ ಅಟ್ಟಹಾಸವನ್ನು ವಿರೋಧಿಸಿ
ಕೊಚ್ಚಿ ಜಿಲ್ಲೆಯ ಯುವ ಜನರು "ಕಿಸ್ ಆಫ್ ಲವ್" ಎಂಬ ವಿನೂತನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ಸಿದ್ಧರಾಗಿದ್ದಾರೆ.

ನವೆಂಬರ್ 2ರಂದು ಕೊಚ್ಚಿನ ಮೆರೀನ್ ಡ್ರೈವ್‌ನಲ್ಲಿ ಹಗ್ ಆ್ಯಂಡ್ ಕಿಸ್  ಡೇ ಆಚರಿಸಲು ಯುವ ಸಮೂಹವೊಂದು ಜನರಿಗೆ ಆಹ್ವಾನ ನೀಡಿದೆ.

ನವೆಂಬರ್ 2, ಭಾನುವಾರ ಸಂಜೆ ಯುವಜೋಡಿಗಳು ಮೆರೀನ್ ಡ್ರೈವ್‌ನಲ್ಲಿ ಒಟ್ಟು ಸೇರಿ ಅಲ್ಲಿ ಆಲಿಂಗಿಸಿ, ಪರಸ್ಪರ ಚುಂಬಿಸಿ ಈ ದಿನವನ್ನು ಆಚರಿಸಲಿದ್ದಾರೆ .

ಪ್ರಸ್ತುತ ದಿನಾಚರಣೆಯನ್ನಾಚರಿಸಲು ಆಹ್ವಾನ ನೀಡಿರುವ ಯುವಕರ ತಂಡವು ಫೇಸ್‌ಬುಕ್‌ನಲ್ಲಿ ಕಿಸ್ ಆಫ್ ಲವ್ ಎಂಬ ಪೇಜ್ ಶುರು ಮಾಡಿದ್ದು, ಈ ಪೇಜ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗಾಗಲೇ 14000 ಮಂದಿ ಈ ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ನೈತಿಕ ಪೊಲೀಸ್ ಅಟ್ಟಹಾಸ ಮಾಡುವುದು ಅಪರಾಧ. ಹೆಚ್ಚಿನ ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಸಂಘಟನೆಗಳು ಇಂಥಾ ಕೆಲಸವನ್ನು ಮಾಡುತ್ತಿವೆ. ಅದರ ವಿರುದ್ಧ ಈ ಪ್ರತಿಭಟನೆ ಎಂಬುದು ಕಿಸ್  ಆಫ್ ಲವ್‌ನ ಉದ್ದೇಶ.

ಇತ್ತೀಚೆಗೆ ಕೊಚ್ಚಿಯಲ್ಲಿ ಡೌನ್ ಟೌನ್ ಕೆಫೆಯೊಂದರಲ್ಲಿ ಯುವ ಜೋಡಿಗಳು ಸರಸ ಸಲ್ಲಾಪದಲ್ಲಿ ತೊಡಗಿದ್ದರು ಎಂದು ಆರೋಪಿಸಿ ರಾಜಕೀಯ ಪಕ್ಷದ ಸಂಘಟನೆಯೊಂದು ನೈತಿಕ ಗೂಂಡಾಗಿರಿ ಮಾಡಿತ್ತು.

ಈ ನೈತಿಕ ಗೂಂಡಾಗಿರಿ ಬಗ್ಗೆ ಕೊಚ್ಚಿಯ ಯುವಜನತೆ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜ್ಯದಲ್ಲಿ ಪರ ವಿರೋಧ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ.

ಆದಾಗ್ಯೂ, ಮೆರೀನ್ ಡ್ರೈವ್‌ನಲ್ಲಿ ಕಿಸ್ ಆಫ್ ಲವ್ ದಿನಾಚರಣೆಯನ್ನು ನಡೆಯಲು ಬಿಡುವುದಿಲ್ಲ ಎಂದು ಪೊಲೀಸರು ಹೇಳಿದ್ದರೂ ಜನರು ಸೇರುವುದನ್ನು ನಮ್ಮಿಂದ ತಡೆಯಲಾಗುವುದಿಲ್ಲ ಎಂದಿದ್ದಾರೆ. ಆದರೆ ಅಲ್ಲಿ ಪ್ರತಿಭಟನೆಯ ಅಂಗವಾಗಿ ಅನೈತಿಕವಾದ ಯಾವುದೇ ಘಟನೆಗಳು ಸಂಭವಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೊಚ್ಚಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement