'ಮನ್ ಕೀ ಬಾತ್'ನಲ್ಲಿ ಜನಾಭಿಪ್ರಾಯವನ್ನು ಓದಲಿದ್ದಾರೆ ಮೋದಿ
ನವೆಂಬರ್ 2ರಂದು ಪ್ರಸಾರವಾಗಲಿರುವ ರೇಡಿಯೋ ಸಂದೇಶ ಮನ್ ಕೀ ಬಾತ್ ನಲ್ಲಿ, ಪ್ರಧಾನಿ ಮೋದಿ ಅವರು...
ನವದೆಹಲಿ: ನವೆಂಬರ್ 2ರಂದು ಪ್ರಸಾರವಾಗಲಿರುವ ರೇಡಿಯೋ ಸಂದೇಶ ಮನ್ ಕೀ ಬಾತ್ ನಲ್ಲಿ, ಪ್ರಧಾನಿ ಮೋದಿ ಅವರು ಜನಾಭಿಪ್ರಾಯಗಳನ್ನೂ ಓದಲಿದ್ದಾರೆ.
ಕಳೆದ ಬಾರಿ ಅಕ್ಟೋಬರ್ 3ರಂದು ಆಕಾಶವಾಣಿಯಲ್ಲಿ ಮನ್ ಕೀ ಬಾತ್ ಪ್ರಸಾರವಾದಾಗ ಅದಕ್ಕೆ ಸಿಕ್ಕಿದ ಜನರ ಪ್ರತಿಕ್ರಿಯೆಯನ್ನು ಮೋದಿ ಈ ಬಾರಿ ಓದಲಿದ್ದಾರೆ.
ಸ್ವಚ್ಛ ಭಾರತ ಮಿಷನ್, ಕೃಷಿ, ಜಲಸಂಪನ್ಮೂಲದ ಸಮಸ್ಯೆ, ಮಹಿಳಾ ಸಬಲೀಕರಣದ ಬಗ್ಗೆ ಜನರ ಅಭಿಪ್ರಾಯಗಳು ನನ್ನ ಕೈ ಸೇರಿದ್ದು, ಅದನ್ನು ನಾನು ಓದಲು ಇಚ್ಛಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಮನ್ ಕೀ ಬಾತ್ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, MyGov Open Forum ನಲ್ಲಿ ನಿಮ್ಮ ಪ್ರತಿಕ್ರಿಯೆಯನ್ನು ದಾಖಲಿಸುತ್ತಿರಿ. ಅದರಲ್ಲಿ ಕೆಲವನ್ನು ನಾನು ಮುಂದಿನ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಓದುತ್ತೇನೆ ಎಂದು ಮೋದಿ ಹೇಳಿದ್ದಾರೆ.